ಕರ್ನಾಟಕ

karnataka

ETV Bharat / state

ಮುಂದುವರಿದ ಕೆಎಸ್​​ಆರ್​​ಟಿಸಿ ನೌಕರರ ಪ್ರತಿಭಟನೆ : ಚಿಕ್ಕಮಗಳೂರಿನಲ್ಲಿ ನೌಕರರ ಜಾಥಾ - ksrtc employees protest in chikmalore

ತಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಚಿಕ್ಕಮಗಳೂರಲ್ಲಿ ನೂರಾರು ಕೆಎಸ್​​ಆರ್​​​ಟಿಸಿ ನೌಕರರು ಪ್ರತಿಭಟನೆ ನಡೆಸಿದರು.

ksrtc employees protest in chikmagalore
ಕೆಎಸ್​​ಆರ್​​ಟಿಸಿ ನೌಕರರ ಪ್ರತಿಭಟನೆ

By

Published : Jan 29, 2020, 5:07 PM IST

ಚಿಕ್ಕಮಗಳೂರು: ನಗರದಲ್ಲಿಂದು ನೂರಾರು ಕೆಎಸ್​​ಆರ್​​ಟಿಸಿ ನೌಕರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂದು ಕಾಲ್ನಡಿಗೆ ಜಾಥಾ ನಡೆಸಿದ್ರು.

ಕೆಎಸ್​​ಆರ್​​ಟಿಸಿ ನೌಕರರ ಪ್ರತಿಭಟನೆ

ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟದಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಮ್ಮ ಒಗ್ಗಟ್ಟಿನಲ್ಲಿ ಬಲವಿದ್ದು ಸರ್ಕಾರಿ ನೌಕರರು ಆಗುವ ಛಲವಿದೆ ಎಂದೂ ಆಕ್ರೋ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಎಲ್ಲಾ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದೂ ಆಗ್ರಹಿಸಿದರು. ಚೌಕಾಶಿ ವೇತನ ಬಿಟ್ಟು ವೇತನ ಪರಿಷ್ಕರಣೆ ಆಗಿ ಸರಿಯಾದ ವೇತನ ನೀಡಿ, ಬೇರೆ ರಾಜ್ಯದಲ್ಲಿ ಜಾರಿಯಾಗಿರುವ ರೀತಿಯಲ್ಲಿ ಎಲ್ಲಾ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಮುಂದಿನ ಬಜೆಟ್ ಅಧೀವೇಶನದಲ್ಲಿ ಈ ವಿಚಾರವನ್ನು ಮಂಡಿಸಬೇಕು ಎಂದು ಆಗ್ರಹಿಸಿದ್ರು. ಸಾಕಷ್ಟು ನೌಕರರು ಪ್ರತಿಭಟನೆಗೆ ತಮ್ಮ ಕೆಲಸದ ಸಮವಸ್ತ್ರದಲ್ಲಿಯೇ ಭಾಗವಹಿಸಿದ್ದು, ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ರು. ನಂತರ ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದ್ರು.

ABOUT THE AUTHOR

...view details