ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಕೆಎಸ್ಆರ್ಟಿಸಿಯ ಬಸ್ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೆಎಸ್ಆರ್ಟಿಸಿ ಬಸ್ನ ರೇಡಿಯೇಟರ್ ಬ್ಲಾಸ್ಟ್: ಚಾಲಕನಿಗೆ ಗಂಭೀರ ಗಾಯ - undefined
ಚಾರ್ಮಾಡಿ ಘಾಟನ್ನು ಹತ್ತುವ ವೇಳೆ ಬಸ್ ಸಂಪೂರ್ಣ ಹೀಟ್ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಕೆಎಸ್ಆರ್ಟಿಸಿಯ ಬಸ್ನ ರೇಡಿಯೇಟರ್ ಬ್ಲಾಸ್ಟ್
ಈ ಬಸ್ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇನ್ನು ಚಾರ್ಮಾಡಿ ಘಾಟಿನಲ್ಲಿ ಸಂಚರಿಸುವ ವೇಳೆ ಬಸ್ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು, ಚಾಲಕ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ ಗಾಯಗೊಂಡ ಬಸ್ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.