ಕರ್ನಾಟಕ

karnataka

ETV Bharat / state

ಮಹಿಳೆಯ ಹೊಟ್ಟೆಯಲ್ಲಿದ್ದ 18 ಕೆಜಿ ತೂಕದ ಗೆಡ್ಡೆ ಹೊರ ತೆಗೆದ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯರು! - ಮಹಿಳೆಯ ಹೊಟ್ಟಿಯಲ್ಲಿ 18 ಕೆಜಿ ಗೆಡ್ಡೆ

ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 18 ಕೆಜಿ ತೂಕದ ಗೆಡ್ಡೆಯನ್ನು ಹೊರ ತೆಗೆಯುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

koppa-government-doctor-managed-to-extract-18-kg-tumor-in-a-womans-stomach
ಮಹಿಳೆಯ ಹೊಟ್ಟೆಯಲ್ಲಿ 18 ಕೆ.ಜಿ ಗೆಡ್ಡೆ

By

Published : Jul 4, 2020, 4:18 PM IST

ಚಿಕ್ಕಮಗಳೂರು:ಮಹಿಳೆಯ ಹೊಟ್ಟೆಯಲ್ಲಿದ್ದ 18 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದು ಮಹಿಳೆಗೆ ಪುನರ್ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ 45 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನ ಅಪರೇಷನ್ ಮಾಡಿ ಕೊಪ್ಪದ ವೈದ್ಯ ಬಾಲಕೃಷ್ಣ ಹಾಗೂ ಅವರ ಸಿಬ್ಬಂದಿ ಹೊರ ತೆಗೆದಿದ್ದಾರೆ. ಚಿಕಿತ್ಸೆ ಬಳಿಕ ಮಹಿಳೆ ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಮಹಿಳೆ ತುಂಬಾ ದಪ್ಪ ಆಗುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಮಹಿಳೆಯ ಹೊಟ್ಟೆಯ ಭಾಗ ಕೂಡ ದಪ್ಪವಾಗತೊಡಗಿತ್ತು. ದಪ್ಪ ಆಗಿರೋ ಪರಿಣಾಮ ಹೊಟ್ಟೆ ಕೂಡ ಉಬ್ಬಿರಬಹುದು ಎಂದು ಭಾವಿಸಿದ್ದರು. ಆದರೆ ದಿನದಿಂದ ದಿನಕ್ಕೆ ಹೊಟ್ಟೆಯ ಭಾರ ಏರುತ್ತಿದ್ದ ಹಿನ್ನೆಲೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಗೆಡ್ಡೆಯೊಂದು ಬೆಳೆಯುತ್ತಿರುವ ಸಂಗತಿ ತಿಳಿದಿದೆ.

ಸಾಮಾನ್ಯವಾಗಿ ½ ಕೆಜಿ, 1 ಕೆಜಿ ಅಬ್ಬಬ್ಬಾ ಹೆಚ್ಚು ಅಂದರೆ 2 ಕೆಜಿ ತೂಕದ ಗೆಡ್ಡೆ ಮನುಷ್ಯನ ದೇಹದಲ್ಲಿ ಬೆಳವಣಿಗೆ ಆಗೋದು ಸಾಮಾನ್ಯ. ಅದನ್ನ ವೈದ್ಯರು ಹೊರ ತೆಗೆದ ವಿಚಾರವನ್ನ ನಾವು ಅಲ್ಲಲ್ಲಿ ಕೇಳುತ್ತಿರುತ್ತೇವೆ. ಆದರೆ ಬರೋಬ್ಬರಿ 18 ಕೆಜಿ ತೂಕದ ಗೆಡ್ಡೆ ಬೆಳೆದಿದೆ ಅನ್ನೋದನ್ನ ತಿಳಿದ ವೈದ್ಯರಿಗೂ ಅಚ್ಚರಿ ಎನಿಸಿ. ಕೂಡಲೇ ಅಪರೇಷನ್ ಮಾಡಿಸಿಕೊಳ್ಳುವಂತೆ ಮಹಿಳೆಗೆ ಸಲಹೆ ನೀಡಿದ್ದರು.

ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲೇ ಇಂತದ್ದೊಂದು ಅಪರೇಷನ್ ಮಾಡಬಹುದು ಅನ್ನೋದನ್ನು ಮಹಿಳೆಗೆ ಹೇಳಿ ಧೈರ್ಯ ತುಂಬಿದ್ದಾರೆ. ಪರಿಣಾಮ ವೈದ್ಯ ಬಾಲಕೃಷ್ಣ ಅವರ ಪರಿಶ್ರಮದಿಂದ ಯಶಸ್ವಿ ಅಪರೇಷನ್ ಕೂಡ ನಡೆದಿದ್ದು, 18 ಕೆಜಿ ತೂಕದ ಗೆಡ್ಡೆ ಹೊರ ತೆಗೆಯಲಾಗಿದೆ. ಸದ್ಯ ಈ ಮಹಿಳೆ ಆರೋಗ್ಯವಾಗಿದ್ದು, ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details