ಕರ್ನಾಟಕ

karnataka

ETV Bharat / state

ಯುವತಿಗೆ ಹತ್ತು ಬಾರಿ ಚೂರಿಯಲ್ಲಿ ಇರಿದು ಯುವಕ ಎಸ್ಕೇಪ್​... ಆಸ್ಪತ್ರಗೆ ಸೇರಿಸಿದ ಜನರು - ಯುವಕ ಮಿಥುನ್

ಚಿಕ್ಕಮಗಳೂರು ಜಿಲ್ಲೆಯ ಯುವತಿಯ ಮೇಲೆ ಯುವಕನೋರ್ವ ದಾಳಿ ಮಾಡಿದ್ದು ಸುಮಾರು 8 ರಿಂದ 10 ಬಾರಿ  ಚೂರಿಯಿಂದ ಇರಿದಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರಿನಲ್ಲಿ ಯುವತಿ ಮೇಲೆ ಬರ್ಬರ ಚಾಕು ಇರಿತ

By

Published : Sep 18, 2019, 6:14 PM IST

ಚಿಕ್ಕಮಗಳೂರು; ಜಿಲ್ಲೆಯ ಯುವತಿಯ ಮೇಲೆ ಯುವಕನೋರ್ವ ದಾಳಿ ಮಾಡಿದ್ದು ಸುಮಾರು 8 ರಿಂದ 10 ಬಾರಿ ಚೂರಿಯಿಂದ ಇರಿದಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಬಾಳೆಹೊನ್ನೂರು - ಕಳಸ ಮಧ್ಯೆ ಬರುವ ಮಾಲಗೋಡು ಗ್ರಾಮದ ಬಳಿ ಗಡಿಗೇಶ್ವರದ ಯುವಕ ಮಿಥುನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಬಾಸಪುರ ಗ್ರಾಮದ ಯುವತಿ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ.

ಚಿಕ್ಕಮಗಳೂರಿನಲ್ಲಿ ಯುವತಿ ಮೇಲೆ ಬರ್ಬರ ಚಾಕು ಇರಿತ

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸ್ವಲ್ವ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ಮಿಥುನ್ ಹಾಗೂ ಈ ಯುವತಿ ನಡುವೆ ಮಾಲಗೋಡು ಬಳಿ ಮಾತಿನ ಚಕಮಕಿ ನಡೆದಿದ್ದು , ಸುಮಾರು 8 ರಿಂದ 10 ಬಾರಿ ಈ ಯುವತಿಯ ಮೇಲೆ ಚೂರಿಯಿಂದಾ ದಾಳಿ ಮಾಡಿದಿದ್ದಾನೆ. ಗಂಭೀರ ಗಾಯದಿಂದ ಈ ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುವಾಗ ಸ್ಥಳೀಯರು ನೋಡಿ ಕಳಸ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಯುವತಿಯ ಸ್ಥಿತಿ ಗಂಭೀರವಾಗಿರುವ ಹಿನ್ನಲೆ ಯುವತಿಯನ್ನು ಹಾಸನಕ್ಕೆ ರವಾನೆ ಮಾಡಲಾಗಿದೆ. ಆರೋಪಿ ಮಿಥುನ್ ಸದ್ಯ ತಲೆ ಮರೆಸಿಕೊಂಡಿದ್ದು ಬಾಳೆಹೊನ್ನೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಆತ ಸಿಕ್ಕ ನಂತರವೇ ಈ ಕೃತ್ಯದ ಅಸಲಿ ಕಾರಣವೇನೆಂಬುದು ತಿಳಿದು ಬರಬೇಕಿದೆ.

ABOUT THE AUTHOR

...view details