ಚಿಕ್ಕಮಗಳೂರು:ಅಮೆರಿಕದ ಪಶು ಡೈರಿ ಹಾಗೂ ಕೋಳಿ ಸಾಕಣಿಕೆ ಮಾರುಕಟ್ಟೆ ಉದ್ಯಮ ಭಾರತಕ್ಕೆ ಕಾಲಿಡುವುದು ಬೇಡ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ - ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಚಿನ್ ಮೀಗಾ
ಅಮೆರಿಕದ ಪಶು ಡೈರಿ ಹಾಗೂ ಕೋಳಿ ಸಾಕಣಿಕೆ ಮಾರುಕಟ್ಟೆ ಉದ್ಯಮ ಭಾರತಕ್ಕೆ ಕಾಲಿಡುವುದು ಬೇಡ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಅಮೆರಿಕದ ಪಶು ಡೈರಿ ಹಾಗೂ ಕೋಳಿ ಸಾಕಾಣಿಕೆ ಮಾರುಕಟ್ಟೆ ಉದ್ಯಮದ ಪ್ರವೇಶದ ನಿಮ್ಮ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಫೆಬ್ರವರಿ 24 ಹಾಗೂ 25ರಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಂದಾಗ ತಾವು ಈ ಕುರಿತು ಸಹಿ ಹಾಕಲಿದ್ದೀರಿ. ಇದನ್ನು ಕರ್ನಾಟಕ ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧ ಮಾಡುತ್ತದೆ ಎಂದು ಬರೆದಿದ್ದಾರೆ.
ಈ ವಲಯದ ಮೇಲೆ ಭಾರತದಲ್ಲಿ 10 ಕೋಟಿಗೂ ಅಧಿಕ ಜನರು ಅವಲಂಬಿತರಾಗಿದ್ದು, ಈ ಒಪ್ಪಂದದಿಂದ ಜನರು ಬೀದಿಗೆ ಬೀಳುವಂತಾಗುತ್ತದೆ ಎಂದು ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
TAGGED:
wrote letter to modi