ಕರ್ನಾಟಕ

karnataka

ETV Bharat / state

ಶೌಚಾಲಯದ ಪೈಪಿನೊಳಗೆ ಅವಿತಿದ್ದ ಕಾಳಿಂಗ: ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಸ್ನೇಕ್​ ಆರೀಫ್​

ಶೌಚಾಲಯದ ಪೈಪಿನಲ್ಲಿ ಅವಿತು ಮಲಗಿದ್ದ ಬೃಹತ್​​ ಗಾತ್ರದ ಕಾಳಿಂಗ ಸರ್ಪವನ್ನು ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಅವಿತಿದ್ದ ಕಾಳಿಂಗ ಸರ್ಪ ರಕ್ಷಣೆ
ಅವಿತಿದ್ದ ಕಾಳಿಂಗ ಸರ್ಪ ರಕ್ಷಣೆ

By

Published : Oct 8, 2020, 2:55 PM IST

ಚಿಕ್ಕಮಗಳೂರು: ಶೌಚಾಲಯದ ಪೈಪಿನಲ್ಲಿ ಅವಿತು ಮಲಗಿದ್ದ 10 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಅವಿತಿದ್ದ ಕಾಳಿಂಗ ಸರ್ಪ ರಕ್ಷಣೆ

ಗ್ರಾಮದ ನರೇಂದ್ರ ಎಂಬುವರ ತೋಟದ ಮನೆಯ ಶೌಚಾಲಯದ ಪೈಪಿನಲ್ಲಿ ಕಾಳಿಂಗ ಸರ್ಪ ಅವಿತುಕೊಂಡಿತ್ತು. ನಿನ್ನೆಯಿಂದ ಮನೆಯ ಸ್ನಾನದ ಕೋಣೆಯಲ್ಲಿ ಸರ್ಪ ಇದ್ದಿದ್ದರಿಂದ ಮನೆಯವರು ಹೆದರಿಕೊಂಡಿದ್ದರು. ಆ ಬಳಿಕ ಈ ವಿಚಾರವನ್ನು ಸ್ನೇಕ್ ಆರೀಫ್ ಎಂಬುವವರಿಗೆ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ, ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಟ್ಟಿದ್ದಾರೆ.

ABOUT THE AUTHOR

...view details