ಚಿಕ್ಕಮಗಳೂರು: ಲೋಕಸಭಾ ಚುನಾವಣೆಯ ಮತದಾನದಿಂದ ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಗ್ರಾಮಸ್ಥರು ದೂರ ಉಳಿದಿದ್ದಾರೆ.
ಬೂತ್ ಬದಲಾವಣೆಯಿಂದ ಅಸಮಾಧಾನ... ಮತದಾನ ಬಹಿಷ್ಕರಿಸಿದ ಕೆಂಜಿಗೆ ಗ್ರಾಮಸ್ಥರು - ಗ್ರಾಮಸ್ಥರು
ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಯಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬೂತ್ ಬದಲಾವಣೆಯಿಂದ ಅಸಮಾಧಾನಗೊಂಡು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.
![ಬೂತ್ ಬದಲಾವಣೆಯಿಂದ ಅಸಮಾಧಾನ... ಮತದಾನ ಬಹಿಷ್ಕರಿಸಿದ ಕೆಂಜಿಗೆ ಗ್ರಾಮಸ್ಥರು](https://etvbharatimages.akamaized.net/etvbharat/images/768-512-3035399-thumbnail-3x2-dgf.jpg)
ಕೆಂಜಿಗೆ ಗ್ರಾಮಸ್ಥರು
600ಕ್ಕೂ ಹೆಚ್ಚು ಮತಗಳಿರುವ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕಾರ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಯಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬೂತ್ ಬದಲಾವಣೆಯಿಂದ ಅಸಮಾಧಾನಗೊಂಡು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.