ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಚಿಕೊಪ್ಪ ಗ್ರಾಮಸ್ಥರು ಇತ್ತೀಚೆಗೆ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಿದ್ದರು. ಮಾ.21ಕ್ಕೆ ಮತ್ತೆ ಕೆಂಚಿಕೊಪ್ಪ ಗ್ರಾಪಂಗೆ ಚುನಾವಣೆ ನಡೆಯಲಿದೆ. ಈ ಬಾರಿಯೂ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಚಿಕ್ಕಮಗಳೂರು : ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್ ನ್ಯೂಸ್
ಕೆಂಚಿಕೊಪ್ಪ, ಮಾಳಿಕೊಪ್ಪ, ಮಠದಹಳ್ಳಿ, ದೊಡ್ಡ ಕುಂದೂರು ಸೇರಿ ಮುಂತಾದ ಗ್ರಾಮದ ಜನ ಕೆಲ ಬೇಡಿಕೆ ಈಡೇರಿಸುವಂತೆ ಹಾಗೂ ಹುಲಿ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ..
ಚಿಕ್ಕಮಗಳೂರು: ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ
ಇದನ್ನೂ ಓದಿ:ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಕೆಂಚಿಕೊಪ್ಪ ಗ್ರಾಮಸ್ಥರು.. ಇವರ ಹೋರಾಟಕ್ಕೂ ಬಲವಾದ ಕಾರಣವಿದೆ..
ಮಾ.21ಕ್ಕೆ ನಡೆಯಲಿರುವ ಗ್ರಾಪಂ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ, ಕೆಂಚಿಕೊಪ್ಪ ಗ್ರಾಪಂ ಎದುರು ಪ್ರತಿಭಟಿಸಿದ್ದಾರೆ. ಕೆಂಚಿಕೊಪ್ಪ, ಮಾಳಿಕೊಪ್ಪ, ಮಠದಹಳ್ಳಿ, ದೊಡ್ಡ ಕುಂದೂರು ಸೇರಿ ಮುಂತಾದ ಗ್ರಾಮದ ಜನ ಕೆಲ ಬೇಡಿಕೆ ಈಡೇರಿಸುವಂತೆ ಹಾಗೂ ಹುಲಿ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ.