ಚಿಕ್ಕಮಗಳೂರು:ಕೆಲ ದಿನಗಳಿಂದ ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಇದರ ನಡುವೆ ಮಲೆನಾಡಿಗರಿಗೆ ಮತ್ತೊಂದು ಆತಂಕ ಶುರುವಾಗಿದೆ.
ಭಾರೀ ಶಬ್ಧದೊಂದಿಗೆ ಕಟ್ಟಿನವಾರೆ ಗುಡ್ಡ ಕುಸಿತ..ಸ್ಥಳೀಯರಲ್ಲಿ ಹೆಚ್ಚಿದ ಆತಂಕ - ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾಂಬಳೆಯ ಕಟ್ಟಿನವಾರೆ ಗುಡ್ಡ ಭಾರೀ ಶಬ್ಧದೊಂದಿಗೆ ಕುಸಿದಿದ್ದು,ಕುದುರೆ ಮುಖದ ಸುತ್ತ ಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.
ಭಾರೀ ಶಬ್ಧದೊಂದಿಗೆ ಕಟ್ಟಿನವಾರೆ ಗುಡ್ಡ ಕುಸಿತ..ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಮತ್ತೆ ಭಾನುವಾರ ತಾಲೂಕಿನ ಜಾಂಬಳೆಯ ಕಟ್ಟಿನವಾರೆ ಗುಡ್ಡ ಕುಸಿದಿದೆ.
ಭಾರೀ ಶಬ್ಧದೊಂದಿಗೆ ಗುಡ್ಡ ಕುಸಿದಿದ್ದು, ಕುದುರೆ ಮುಖದ ಸುತ್ತ ಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ.