ಚಿಕ್ಕಮಗಳೂರು :ಗುಟ್ಕಾ ಮಾದರಿಯಲ್ಲಿ ಸಿಗರೇಟ್ ಬ್ಯಾನ್ ಮಾಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಗುಟ್ಕಾ ಮಾದರಿ ಸಿಗರೇಟ್ ಬ್ಯಾನ್ ಮಾಡಲು ಕರ್ನಾಟಕ ಕಿಸಾನ್ ಕಾಂಗ್ರೆಸ್ ಒತ್ತಾಯ.. - ban cigarette
ಪ್ರಧಾನಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ಪತ್ರ ಬರೆಯಲಾಗಿದೆ. ಜನ ಸಿಗರೇಟ್ ಸೇದಿ ಹೊರಗಡೆ ಬಿಸಾಡುತ್ತಾರೆ. ಇದರಿಂದಲೂ ಕೊರೊನಾ ಹರಡುವ ಆತಂಕವನ್ನ ವ್ಯಕ್ತಪಡಿಸಲಾಗಿದೆ.
ಗುಟ್ಕಾ ಮಾದರಿಯಲ್ಲಿ ಸಿಗರೇಟ್ ಬ್ಯಾನ್ ಮಾಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಒತ್ತಾಯ
ಪ್ರಧಾನಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ಪತ್ರ ಬರೆದಿದ್ದು, ಜನರು ಸಿಗರೇಟ್ ಸೇದಿ ಹೊರಗಡೆ ಬಿಸಾಡುತ್ತಾರೆ. ಇದರಿಂದ ಸಹ ಕೊರೊನಾ ಹರಡುವ ಸಾಧ್ಯತೆಯಿದೆ. ಬಿಸಾಡಿದ ಸಿಗರೇಟ್ನ CFTRI ಲ್ಯಾಬ್ಗೆ ಕಳುಹಿಸಿ, ಪರೀಕ್ಷಿಸಿ ಎಂದು ಪತ್ರದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಗುಟ್ಕಾ ನಿಷೇಧದ ಹಿಂದೆ ಸಿಗರೇಟ್ ಕಂಪನಿಗಳ ಲಾಬಿಯಿದೆ ಎಂದು ಅವರು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.