ಚಿಕ್ಕಮಗಳೂರು: 'ಭೂಮಿಗೆ ವರುಣನ ಸಿಂಚನವಾಯಿತು. ಕುರುಪಾಂಡವರು ಕಾದಾಡಿದರು. ಧರ್ಮದ ಜ್ಯೋತಿ ಬೆಳಗಿದರು' ಎಂದು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ಭವಿಷ್ಯ ನುಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಮಹಾನವಮಿಯ ಬಯಲಿನಲ್ಲಿ ಈ ಕಾರ್ಣಿಕ ನುಡಿ ನಡೆದಿದ್ದು, ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ. ಭೂಮಿಗೆ ವರುಣನ ಸಿಂಚನವಾಯಿತು.(ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ. ಈ ಹಿಂದೆ ಸುರಿದ ಮಳೆಯಿಂದ ಅನಾಹುತವೇ ಜಾಸ್ತಿ ಆಯ್ತು. ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ) ಕುರು ಪಾಂಡವರು ಕಾದಾಡಿದರು.(ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟಗಳು ಹೆಚ್ಚಾಗಲಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಕಿತ್ತಾಟಗಳು ಹೆಚ್ಚಾಗಲಿವೆ).