ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರೇಮ ಕೋದಂಡರಾಮ ಶ್ರೇಷ್ಠಿ ಅವರಿಗೆ ಅವರ ಮನೆಯಲ್ಲೇ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೇಮ ಕೋದಂಡರಾಮ ಶ್ರೇಷ್ಠಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ - kannada rajyostava award
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಪ್ರೇಮ ಕೋದಂಡರಾಮ ಶ್ರೇಷ್ಠಿ ಅವರ ಮನೆಗೆ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅನಾರೋಗ್ಯದ ನಿಮಿತ್ತ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಲು ಆಗದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಚಿಕ್ಕಮಗಳೂರಿನ ಅವರ ನಿವಾಸದಲ್ಲಿ ನಿಕಟಪೂರ್ವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಅವರ ಮನೆಗೆ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿಯು ಚಿನ್ನದ ಪದಕ, 1 ಲಕ್ಷ ಹಣ, ನೆನಪಿನ ಕಾಣಿಕೆ ಒಳಗೊಂಡಿದ್ದು, ಈ ವೇಳೆ ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು ಪ್ರೇಮ ಅವರ ಮಗ ನಟರಾಜ್, ಸೊಸೆ ಗಾಯತ್ರಿ ಹಾಗೂ ಅವರ ಶಿಷ್ಯರು ಮತ್ತು ಶ್ರೀಮತಿ ಶಾಂತಮ್ಮ ವ್ಯವಸ್ಥಾಪಕರು ಕನ್ನಡ ಭವನ ಬೆಂಗಳೂರು ಉಪಸ್ಥಿತರಿದ್ದರು.