ಕರ್ನಾಟಕ

karnataka

ಮಲೆನಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ!

ಎನ್​ಆರ್​ಪುರ ತಾಲೂಕಿನ ಕುದುರೆಗುಂಡಿಯ ಚೇತನ್ ಜೈನ್ ಎಂಬುವರ ಮನೆಯ ಹಿಂಭಾಗದಲ್ಲಿ ಇದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹರೀಂದ್ರ ಯಶಸ್ವಿಯಾಗಿದ್ದಾರೆ. ಅರಣ್ಯಾಧಿಕಾರಿಗಳ ಸೂಚನೆಯ ಮೇರೆಗೆ ಕಾಳಿಂಗ ಸರ್ಪವನ್ನು ಸ್ಥಳೀಯ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

By

Published : Jan 30, 2020, 5:19 PM IST

Published : Jan 30, 2020, 5:19 PM IST

Kalinga snake Captured by Harindra at Chickmagaluru!
ಮಲೆನಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

ಜಿಲ್ಲೆಯ ಎನ್​ಆರ್​ಪುರ ತಾಲೂಕಿನ ಕುದುರೆಗುಂಡಿಯ ಚೇತನ್ ಜೈನ್ ಎಂಬುವರ ಮನೆಯ ಹಿಂಭಾಗದಲ್ಲಿ ಇದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಮನೆಯ ಸದಸ್ಯರು ಉರಗ ತಜ್ಞ ಹರೀಂದ್ರ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪವನ್ನು ಹುಡುಕಿದರು.

ಕೊಟ್ಟಿಗೆಯ ಮೇಲೆ ಕಾಳಿಂಗ ಸರ್ಪ ಮಲಗಿತ್ತು. ನಂತರ ಈ ಕಾಳಿಂಗ ಕೆಳಗೆ ಇಳಿದು ಕೃಷಿ ಪರಿಕರಗಳು ಇಟ್ಟಿದ್ದ ಜಾಗದಲ್ಲಿ ಅವಿತುಕೊಂಡಿತ್ತು, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸ್ನೇಕ್ ಹರೀಂದ್ರ ಅವರು ಈ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಸ್ನೇಕ್ ಹರೀಂದ್ರ ಅವರು ಇಲ್ಲಿಯವರೆಗೂ 298 ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅರಣ್ಯಾಧಿಕಾರಿಗಳ ಸೂಚನೆಯ ಮೇರೆಗೆ ಕಾಳಿಂಗ ಸರ್ಪವನ್ನು ಸ್ಥಳೀಯ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details