ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಲಗಾರು ಗ್ರಾಮದಲ್ಲಿ ನಾಗರಹಾವನ್ನು ಬೆನ್ನತ್ತಿ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹರೀಂದ್ರ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು: ನಾಗರಹಾವಿನ ಬೇಟೆಗೆ ಬಂದಿದ್ದ ಕಾಳಿಂಗ ಸೆರೆ - Cobra
ನಾಗರಹಾವನ್ನು ಭಕ್ಷಿಸಲು ಬಂದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಲಗಾರು ಗ್ರಾಮದಲ್ಲಿ ನಡೆದಿದೆ.
ಮನೆ ಎದುರಿನ ಮರದ ಪೊಟರೆಯಲ್ಲಿದ್ದ ನಾಗರಹಾವನ್ನು ಭಕ್ಷಿಸಲು ಹೋಗಿದ್ದ ಕಾಳಿಂಗ ಸರ್ಪವನ್ನು ನೋಡಿ, ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಮನೆಯ ಸದಸ್ಯರ ಮುಂದೆ ನಾಗರ ಹಾವನ್ನು ಬೆನ್ನತ್ತಿ ಬಂದಿದ್ದ ಕಾಳಿಂಗನನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ನಂತರ ಇವರ ಕೈಯಲ್ಲಿ ಸಾಧ್ಯವಾಗದಿದ್ದಾಗ ಕೂಡಲೇ ಉರಗ ತಜ್ಞ ಹರಿಂದ್ರಗೆ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಹರೀಂದ್ರ ನಾಗರಹಾವನ್ನು ಕಾಳಿಂಗ ಸರ್ಪದ ಬಾಯಿಂದ ಬಿಡಿಸಿ ಸೆರೆ ಹಿಡಿದಿದ್ದಾರೆ. ಕಾಳಿಂಗನ ಬಾಯಿಂದ ಎಸ್ಕೇಪ್ ಆದ ನಾಗರಹಾವು ನಿಟ್ಟುಸಿರುಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಕಾಳಿಂಗ ಸರ್ಪವನ್ನು ಸ್ಥಳೀಯ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.