ಕರ್ನಾಟಕ

karnataka

ETV Bharat / state

ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ - ಕಡೂರು ಗಾಂಧಿನಗರದ ಬಳಿ ಚಿರತೆಯ ಶವ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದ ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಂಧೀನಗರದ ನೀಲಗಿರಿ ತೋಪಿನ ಪಕ್ಕದ ಕಾಲುವೆಯೊಂದರಲ್ಲಿ ನೀರಿನೊಳಗೆ ಸುಮಾರು 6 ವರ್ಷದ ಗಂಡು ಚಿರತೆ ಶವ ಕಂಡುಬಂದಿದೆ.

Kaduru: Cheetha is caught dead in decay condition
ಕಡೂರು: ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

By

Published : Jan 12, 2020, 3:54 AM IST

ಚಿಕ್ಕಮಗಳೂರು: ಕಡೂರು ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದ ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಗಾಂಧೀನಗರದ ನೀಲಗಿರಿ ತೋಪಿನ ಪಕ್ಕದ ಕಾಲುವೆಯೊಂದರಲ್ಲಿ ನೀರಿನೊಳಗೆ ಸುಮಾರು 6 ವರ್ಷದ ಗಂಡು ಚಿರತೆ ಶವ ಕಂಡು, ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ.

ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಎಸಿಎಫ್ ಮುದ್ದಣ್ಣ ಮತ್ತು ಉಪ ಅರಣ್ಯಾಧಿಕಾರಿ ಸಂತೋಷ್ ಅವರು ಎಮ್ಮೆದೊಡ್ಡಿ ಪಶು ಚಿಕಿತ್ಸಾಲಯದಲ್ಲಿ ನಡೆಸಿದ್ದಾರೆ. ಚಿರತೆಯ ಪಂಜಾದಲ್ಲಿ ಗಾಯಗಳು ಇರುವುದರಿಂದ ಚಿರತೆಯು ಕಾದಾಟದಲ್ಲಿ ಮೃತಪಟ್ಟಿರುವಂತೆ ಕಾಣಿಸುತ್ತಿದೆ. ಕಡೂರು ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details