ಕರ್ನಾಟಕ

karnataka

ETV Bharat / state

ಸಿನಿಮಾ ಸ್ಟೈಲಿನಲ್ಲಿ ಯುವತಿಯ ಅಪಹರಣ: ಕಿರಾತಕರ ಹೆಡೆಮುರಿ ಕಟ್ಟಿದ ಕಡೂರು ಪೊಲೀಸ್​ - ಯುವತಿ ಅಪಹರಣ ಆರೋಪಿಗಳ ಬಂಧಿಸಿದ ಪೊಲೀಸ್​

ಚಿಕ್ಕಮಗಳೂರು ಯುವತಿ ಅಪಹರಣ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಕಡೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Kadur police arrested young women kidnapping case accused
ಚಿಕ್ಕಮಗಳೂರು ಯುವತಿ ಅಪಹರಣ ಕೇಸ್​ ಆರೋಪಿಗಳ ಬಂಧನ

By

Published : Jan 1, 2022, 10:02 PM IST

Updated : Jan 1, 2022, 11:02 PM IST

ಚಿಕ್ಕಮಗಳೂರು:ಸಿನಿಮಾ ಶೈಲಿಯಲ್ಲಿ ಮನೆಗೆ ನುಗ್ಗಿ ಯುವತಿಯ ಪೋಷಕರಿಗೆ ಹೊಡೆದು ಆಕೆಯನ್ನು ಅಪಹರಣ ಮಾಡಿದ್ದ ಕಿರಾತಕರನ್ನು ಪೊಲೀಸರು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಯುವತಿ ಪ್ರಕಹರಣ ಸಂಬಂಧ ಚಿಕ್ಕಮಗಳೂರು ಎಸ್ಪಿ ಮಾಹಿತಿ ನೀಡಿರುವುದು

ಡಿ.31ರಂದು ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ಎನ್.ಜಿ.ಕೊಪ್ಪಲು ಗ್ರಾಮದ ಪರಮೇಶ್ ಆತನ ಸಂಗಡಿಗರು ನುಗ್ಗಿದ್ದರು. ಯುವತಿಯ ಪೋಷಕರಿಗೆ ಥಳಿಸಿ, ಅವರನ್ನು ಕಟ್ಟಿ ಹಾಕಿ ಯುವತಿಯೊಂದಿಗೆ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಶೀಘ್ರವೇ ಕಾರ್ಯ ಪ್ರವೃತ್ತರಾದ ಕಡೂರು ಪಿಎಸ್ಐ ರಮ್ಯಾ ಹಾಗೂ ಸಿಬ್ಬಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಇತ್ತ ಯುವತಿಯ ಪೋಷಕರು, ಸಂಬಂಧಿಕರು ಕಿರಾತರು ನಮ್ಮ ಹುಡುಗಿಯ ಜೀವನನ್ನು ಹಾಳು ಮಾಡ್ತಾರೆಂದು ಕಂಗಾಲಾಗಿದ್ದರು. ಆದರೆ ಕೇವಲ ಒಂದೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಕಡೂರು ಪೊಲೀಸರು, ಯುವತಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಪೊಲೀಸರಿಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಯುವತಿ ಅಪಹರಣಕ್ಕೆ ಕಾರಣ..

ಒಂದು ವರ್ಷದ ಹಿಂದೆ ಮದುವೆ ಮಾಡಿಕೊಡುವಂತೆ ಎನ್.ಜಿ.ಕೊಪ್ಪಲು ಗ್ರಾಮದ ಪರಮೇಶ್​ ಎಂಬಾತ ​ಕೇಳಿದ್ದನಂತೆ. ಆದರೆ ಆತನ ಬಗ್ಗೆ ತಿಳಿದಿದ್ದ ಹುಡುಗಿ ಹಾಗೂ ಆಕೆಯ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಇದೇ ಸಿಟ್ಟಿನಿಂದ ಪರಮೇಶ್​​ ಅದೇ ಗ್ರಾಮದ ಮಾರುತಿ, ಮಲ್ಲೇಶ್ ಎಂಬ ಕಿಡಿಗೇಡಿ ಸಹೋದರ ಜೊತೆ ಸೇರಿ ಯುವತಿಯ ಅಪಹರಣಕ್ಕೆ ಸ್ಕೆಟ್​ ಹಾಕಿದ್ದನು. ಅದರಂತೆ ಆಕೆಯನ್ನು ಕಿಡ್ಯ್ನಾಪ್​ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಶೀಘ್ರ ತನಿಖೆ ಕೈಗೊಂಡ ಖಾಕಿ:

ಬೊಲೆರೋದಲ್ಲಿ ಬಂದು ಯುವತಿ ಅಪಹರಣ ಮಾಡಿದ ಕುರಿತಂತೆ ಮಾಹಿತಿ ಪಡೆದ ಕಡೂರು ಪೊಲೀಸರು, ಲಭ್ಯವಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಕೊನೆಗೆ ಸಗನಿ ಬಸವನಹಳ್ಳಿಯ ಮನೆಯೊಂದರಲ್ಲಿ ಯುವತಿಯನ್ನು ಬಚ್ಚಿಟ್ಟಿರೋದನ್ನು ಖಚಿತ ಪಡಿಸಿಕೊಂಡ ಅಧಿಕಾರಿಗಳು ಹುಡುಗಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರಕರಣ ಸಂಬಂಧ 7 ಮಂದಿಯಲ್ಲಿ ಪ್ರಮುಖ ಆರೋಪಿ ಪರಮೇಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ. ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಮಗಳು ಮರಳಿ ಮನೆಗೆ ಬಂದಿದ್ದಕ್ಕೆ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಕಾಡದ ನೈಟ್ ಕರ್ಫ್ಯೂ : ಕಳೆದ ವರ್ಷಕ್ಕಿಂತಲೂ ಅಧಿಕ ಮಾರಾಟ

Last Updated : Jan 1, 2022, 11:02 PM IST

ABOUT THE AUTHOR

...view details