ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳಾದ ದುರ್ಗದಹಳ್ಳಿ, ಮೈದಾಡಿ, ಮಧುಗುಂಡಿ, ಹಲಗಡಕ, ಗೌಡನಕೂಡಿಗೆ, ಬಲಿಗೆ, ತೋಟದಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜೀಪ್ ರ‍್ಯಾಲಿ ನಡೆಯಿತು.
ಚಿಕ್ಕಮಗಳೂರು : ನೆರೆಪೀಡಿತ ಪ್ರದೇಶಗಳಲ್ಲಿಯೂ ಜೀಪ್ ರ್ಯಾಲಿ.. - jeep rally
ಕೆಸರುಮಯ ರಸ್ತೆಯಲ್ಲಿ ನಡೆದ ಜೀಪ್ ರ‍್ಯಾಲಿಯ ಸಾಹಸಮಯ ದೃಶ್ಯವನ್ನ ಸ್ಥಳೀಯರು ಕಣ್ತುಂಬಿಕೊಂಡರು. ರ‍್ಯಾಲಿಯಲ್ಲಿ ಭಾಗವಹಿಸಿದ ಕೆಲ ಜೀಪ್ಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಟ್ಯಾಕ್ಟರ್‌ನ ಮೂಲಕ ಹೊರ ತೆಗೆಯಲಾಯಿತು..
ಕೆಸರುಮಯ ರಸ್ತೆಯಲ್ಲಿ ನಡೆದ ಜೀಪ್ ರ‍್ಯಾಲಿಯ ಸಾಹಸಮಯ ದೃಶ್ಯವನ್ನ ಸ್ಥಳೀಯರು ಕಣ್ತುಂಬಿಕೊಂಡರು. ರ‍್ಯಾಲಿಯಲ್ಲಿ ಭಾಗವಹಿಸಿದ ಕೆಲ ಜೀಪ್ಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಟ್ಯಾಕ್ಟರ್‌ನ ಮೂಲಕ ಹೊರ ತೆಗೆಯಲಾಯಿತು.
ಮಂಗಳೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ ಮೊದಲಾದ ಕಡೆಗಳಿಂದ ಸುಮಾರು 40ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು. ಕಡಿದಾದ ದುರ್ಗಮ ಹಾದಿಗಳನ್ನು ಲೆಕ್ಕಿಸದೆ ಮುನ್ನುಗ್ಗುತ್ತಿದ್ದ ವಾಹನ ಸವಾರರ ಗುಂಡಿಗೆ ನೋಡಿ ಸಾರ್ವಜನಿಕರು ಆಶ್ಚರ್ಯಗೊಂಡರು. ಕಳೆದ ವರ್ಷವಷ್ಟೇ ನೆರೆಯಿಂದ ಹಲವೆಡೆ ಗುಡ್ಡ ಕುಸಿದು ಹಾನಿಯಾಗಿದ್ದ ಪ್ರದೇಶದಲ್ಲಿ ಜೀಪ್ ರ‍್ಯಾಲಿ ನಡೆಸಿದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.