ಚಿಕ್ಕಮಗಳೂರು:ಕಾಂಗ್ರೆಸ್,ಜೆಡಿಎಸ್ನ ಕೆಲ ಮುಖಂಡರು ಬಿಜೆಪಿ ಸಿದ್ದಾಂತ ಒಪ್ಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವಿಧಾನ ಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯತ್ ಸುತ್ತಮುತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಕೆಲ ಮುಖಂಡರು ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇವರನ್ನು ಎಂ ಕೆ ಪ್ರಾಣೇಶ್ ಸ್ವಾಗತಿಸಿ, ಬಿಜೆಪಿ ಪಕ್ಷ ಯಾವುದೇ ಬೇಧ ಭಾವ ಮಾಡದೇ ಸರ್ವರ ಏಳಿಗೆಗಾಗಿ ಶ್ರಮಿಸುವ ಪಕ್ಷವಾಗಿದೆ ಎಂದೂ ಅವರಿಗೆ ಭರವಸೆ ನೀಡಿದರು.
ಬಿಜೆಪಿ ಪಕ್ಷವು ಸಿದ್ಧಾಂತ ಮತ್ತು ಸಾಧನೆಯ ತಳಹದಿಯಲ್ಲಿ ಬೆಳೆದು ಬಂದ ಪಕ್ಷವಾಗಿದ್ದು, ಕಾರ್ಯಕರ್ತರೇ ಪಕ್ಷದ ಜೀವಾಳ ಆಗಿದ್ದಾರೆ. ಹಾಗಾಗಿಯೆ ನಮ್ಮದು ವಿಶ್ವದ ಅತಿ ದೊಡ್ಡ ಪಕ್ಷವಾಗಿದ್ದು, ಯಾವುದೇ ಕಾರ್ಯಕರ್ತರ ಮನಸನ್ನು ಪಕ್ಷದ ನಾಯಕರು ಮತ್ತು ಜನಪ್ರತಿನಿದಿಗಳು ನೋಯಿಸಬಾರದು. ನಮ್ಮಲ್ಲಿ ಯಾವುದೇ ಮನಸ್ಥಾಪಗಳು ಕಂಡು ಬಂದರೂ ಕೂಡಲೇ ಹಿರಿಯರ ಗಮನಕ್ಕೆ ತರಲಾಗುವುದು ಎಂದರು.