ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯ ಉಗಮಸ್ಥಾನ ಜಾವಳಿಯಲ್ಲಿ ಗಣಪತಿಯ ಪಲ್ಲಕ್ಕಿ ಉತ್ಸವ ಸಡಗರದಿಂದ ಜರುಗಿತು.
ಅದ್ದೂರಿಯಾಗಿ ಜರುಗಿದ ಜಾವಳಿ ಗಣಪತಿ ಪಲ್ಲಕ್ಕಿ ಉತ್ಸವ - Mudigere in Chikkamagaluru district
ಚಿಕ್ಕಮಗಳೂರು ಜಿಲ್ಲೆಯ ಹೇಮಾವತಿ ನದಿಯ ಉಗಮಸ್ಥಾನ ಜಾವಳಿಯಲ್ಲಿ ಗಣಪತಿಯ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಅದ್ದೂರಿಯಾಗಿ ಜರುಗಿದ ಜಾವಳಿ ಗಣಪತಿಯ ಪಲ್ಲಕ್ಕಿ ಉತ್ಸವ
ಕೊರೊನಾ ಹಿನ್ನೆಲೆ ಗ್ರಾಮಸ್ಥರು ಸಾಮಾಜಿಕ ಅಂತರ ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಹತ್ತಾರು ಹಳ್ಳಿಯ ಸಾವಿರಾರು ಜನ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಅಲ್ಲದೇ ದೇವಸ್ಥಾನ ಕಟ್ಟಿ ತುಂಬಾ ವರ್ಷ ಆಗಿರುವ ಕಾರಣ ಜೀರ್ಣೋದ್ದಾರ ಮಾಡಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ. ಈ ತಿಂಗಳು ಅಷ್ಟಮಂಗಳ ಪ್ರಶ್ನೆಯನ್ನು ಹಾಕಿ ನಂತರ ಜೀರ್ಣೋದ್ದಾರ ನಡೆಯಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.