ಚಿಕ್ಕಮಗಳೂರು:ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಇತ್ತ ಚಿಕ್ಕಮಗಳೂರಲ್ಲಿ PWD ಗುತ್ತಿಗೆದಾರನಿಗೂ ಶಾಕ್ ನೀಡಿದ್ದಾರೆ.
PWD ಗುತ್ತಿಗೆದಾರನ ಮನೆ ಮೇಲೆ ಐಟಿ ರೈಡ್ - ಅಕ್ರಮ ಆಸ್ತಿಗಳಿಕೆ ಆರೋಪ
ಚಿಕ್ಕಮಗಳೂರಿನಲ್ಲಿರುವ PWDಯ ಕ್ಲಾಸ್ ಒನ್ ಕಾಂಟ್ರಾಕ್ಟರ್ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
PWD ಗುತ್ತಿಗೆದಾರನ ಮನೆ ಮೇಲೆ ಐಟಿ ರೈಡ್
ನಗರದ ಚನ್ನಾಪುರ ರಸ್ತೆಯ ಸಿ.ಹೆಚ್.ವಿ.ಎನ್. ರೆಡ್ಡಿ PWDಯ ಕ್ಲಾಸ್ ಒನ್ ಕಾಂಟ್ರಾಕ್ಟರ್ ಅವರ ಮನೆಯ ಮೇಲೆ ಎರಡು ಕಾರುಗಳಲ್ಲಿ ಬಂದ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಐಟಿ ರೇಡ್ ಆಗಿದೆ ಎನ್ನಲಾಗುತ್ತಿದ್ದು, ಮನೆಯಲ್ಲಿರುವ ದಾಖಲೆ ಪತ್ರಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.