ಚಿಕ್ಕಮಗಳೂರು: ಜಿಲ್ಲೆಯಲ್ಲಿ ವೈನ್ ಶಾಪ್ ಓಪನ್ ಆಗಿದೆ ಎಂದು ಮದ್ಯಕ್ಕೆ ಜನರು ಮುಗಿ ಬಿದ್ದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಳ್ಳತನವಾಗಿದ್ದ ಬಾರ್ನಲ್ಲಿ ಪೊಲೀಸರ ಪರಿಶೀಲನೆ: ಮದ್ಯಕ್ಕಾಗಿ ಮುಗಿಬಿದ್ದ ಮದ್ಯ ಪ್ರಿಯರು! - ಚಿಕ್ಕಮಗಳೂರಿನಲ್ಲಿ ಕೊರೊನಾ ಎಫೆಕ್ಟ್
ಕಳ್ಳತನವಾಗಿದ್ದ ಬಾರ್ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಮದ್ಯ ಸಿಗುತ್ತೆ ಎಂದು ಮದ್ಯ ಪ್ರಿಯರು ಓಡೋಡಿ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕಳ್ಳತನವಾಗಿದ್ದ ಬಾರ್ನಲ್ಲಿ ಪೊಲೀಸರ ಪರಿಶೀಲನೆ
ಕಳ್ಳತನವಾಗಿದ್ದ ಬಾರ್ನಲ್ಲಿ ಪೊಲೀಸರ ಪರಿಶೀಲನೆ
ಬಾರ್ ಓಪನ್ ಆಗಿದೆ ಎಂದು ಜನರು ಓಡೋಡಿ ಬಂದಿದ್ದು, ಸುತ್ತಮುತ್ತಲಿನ ಗ್ರಾಮದ ಮದ್ಯಪ್ರಿಯರ ದಂಡೇ ಆಗಮಿಸಿತ್ತು. ಕಳೆದ ರಾತ್ರಿ ವೈನ್ ಶಾಪ್ ಡೋರ್ ಮುರಿದು ಮದ್ಯ ಕಳ್ಳತನ ಹಿನ್ನೆಲೆ ಪೊಲೀಸರು ಪರಿಶೀಲನೆಗಾಗಿ ವೈನ್ ಶಾಪ್ ಡೋರ್ ಓಪನ್ ಮಾಡಿದ್ದರು.
ಆದರೆ ಬಾಗಿಲು ತೆರೆದಿರೋದನ್ನು ಕಂಡು ಎಣ್ಣೆಗಾಗಿ ಜನರು ಮುಗಿಬಿದಿದ್ದು, ಮದ್ಯಪ್ರಿಯರಿಗೆ ತಿಳಿ ಹೇಳಿ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಯಗಟಿ ಪೊಲೀಸರು ವೈನ್ ಶಾಪ್ ಪರಿಶೀಲನೆ ನಡೆಸುತ್ತಿದ್ದಾರೆ.