ಚಿಕ್ಕಮಗಳೂರು: ಕೊರೊನಾ ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕಳೆದ ಮೂರು ವಾರಗಳಿಂದ ಪ್ರತಿದಿನ ಬೆಳಗಿನ ಉಪಾಹಾರವನ್ನು ಇನ್ನರ್ ವ್ಹೀಲ್ ಕ್ಲಬ್ ನ ಜೀವನ್ ಸಂಧ್ಯಾ ವೃದ್ಧಾಶ್ರಮ ಪೂರೈಕೆ ಮಾಡುತ್ತಿದೆ.
ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ನೆರವಿನ ಹಸ್ತ ನೀಡಿದ ಇನ್ನರ್ ವ್ಹೀಲ್ ಕ್ಲಬ್ ಕಾರ್ಯಕ್ಕೆ ಶ್ಲಾಘನೆ
ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗೆ ಕಳೆದ ಮೂರು ವಾರಗಳಿಂದ ಪ್ರತಿದಿನ ಬೆಳಗಿನ ಉಪಾಹಾರವನ್ನು ಇನ್ನರ್ ವ್ಹೀಲ್ ಕ್ಲಬ್ ನ ಜೀವನ್ ಸಂಧ್ಯಾ ವೃದ್ಧಾಶ್ರಮ ಪೂರೈಕೆ ಮಾಡುತ್ತಿದೆ.
ಇಂದು ಕಡೆಯ ದಿನವಾದ ಕಾರಣ ಇನ್ನರ್ ವ್ಹೀಲ್ ಕ್ಲಬ್ ಆಡಳಿತ ಮಂಡಳಿಯ ವತಿಯಿಂದ ಒಂದು ಸರಳ ಕಾರ್ಯಕ್ರಮವನ್ನು ಜೀವನ್ ಸಂಧ್ಯಾ ವೃಧ್ಧಾಶ್ರಮದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್ ಚೇಂಗಟಿ ಆಗಮಿಸಿದ್ದರು. ವೃದ್ಧಾಶ್ರಮದ ಆಹಾರ ತಯಾರಿಕಾ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಕಡೆಯ ದಿನದ ತಿಂಡಿಯ ಪೊಟ್ಟಣಗಳನ್ನು ಪಿಎಸ್ಐ ರಮ್ಯ ಅವರಿಗೆ ನ್ಯಾಯಧೀಶ ಬಸವರಾಜ್ ಚೇಂಗಟಿ ಹಸ್ತಾಂತರಿಸಿದರು. ಪೊಲೀಸರ ಕರ್ತವ್ಯವನ್ನು ಗುರುತಿಸಿ ಅವರಿಗಾಗಿ ಸೇವೆ ಸಲ್ಲಿಸಿದ ಇನ್ನರ್ ವ್ಹೀಲ್ ಕ್ಲಬ್ ನ ಆಡಳಿತ ಮಂಡಳಿಯವರಿಗೆ ಧನ್ಯವಾದ ತಿಳಿಸಿದರು.
TAGGED:
Inner Wheel Club