ಚಿಕ್ಕಮಗಳೂರು :ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಂದು ಭಾನುವಾರವಾದ್ದರಿಂದ ರಾಜ್ಯದಲ್ಲಿಯೇ ಅತೀ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಗೆ ಜನಸಾಗರವೇ ಹರಿದು ಬಂದಿತ್ತು.
ಭಾನುವಾರ ಹಿನ್ನೆಲೆ.. ಮುಳ್ಳಯ್ಯನಗಿರಿಗೆ ಹರಿದು ಬಂತು ಪ್ರವಾಸಿಗರ ದಂಡು - Chikmagalur News
ಮಳೆ ಹಾಗೂ ಮಂಜಿನಿಂದ ಮುಳ್ಳಯ್ಯನಗಿರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ..
ಮುಳ್ಳಯ್ಯನಗಿರಿಗೆ ಹರಿದು ಬಂತು ಪ್ರವಾಸಿಗರ ದಂಡು
ಕೊರೊನಾ ವೈರಸ್ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಮುಳ್ಳಯ್ಯನ ಗಿರಿ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧವಿತ್ತು. ಇದೀಗ ನಿರ್ಬಂಧ ತೆರವುಗೊಳಿಸಲಾಗಿದೆ. ರಾಜ್ಯದ ಮೂಲೆ-ಮೂಲೆಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಂದು ಒಂದೇ ದಿನ 780 ಕಾರು, 380 ಬೈಕ್ ಹಾಗೂ 70 ಟಿಟಿ ವಾಹನಗಳಲ್ಲಿ ಪ್ರವಾಸಿಗರು ಆಗಮಿಸಿದ್ದರು.
ಮಳೆ ಹಾಗೂ ಮಂಜಿನಿಂದ ಮುಳ್ಳಯ್ಯನಗಿರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರವಾಸಿಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.