ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಉತ್ತಮ ಮಳೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿರುವ ತುಂಗಾ ಮತ್ತು ಭದ್ರಾ ನದಿಗಳು ಮೈದುಂಬಿ ಹರಿಯಲು ಪ್ರಾರಂಭ ಮಾಡಿವೆ.
ರಾಜ್ಯದ ನದಿಗಳ ನೀರಿನ ಹರಿವು ಗಣನೀಯ ಏರಿಕೆ.. ಮಲೆನಾಡು, ಘಟ್ಟಗಳ ಭಾಗದಲ್ಲಿ ಅಧಿಕ ಮಳೆ
ಮಲೆನಾಡು ಹಾಗೂ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಳೆದ ಮೂರು ದಿನಗಳಿಂದ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು, ಒಂದೇ ಸಮನೇ ವೇಗವಾಗಿ ಹರಿಯಲು ಪ್ರಾರಂಭ ಮಾಡಿವೆ. ವಿಶೇಷವಾಗಿ ತುಂಗ ಮತ್ತು ಭದ್ರಾ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ.
ಮಲೆನಾಡು ಹಾಗೂ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಳೆದ ಮೂರು ದಿನಗಳಿಂದ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು, ಒಂದೇ ಸಮನೇ ವೇಗವಾಗಿ ಹರಿಯಲು ಪ್ರಾರಂಭಿಸಿವೆ. ವಿಶೇಷವಾಗಿ ತುಂಗಾ ಮತ್ತು ಭದ್ರಾ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ.
ಕುದುರೆ ಮುಖ, ಕಳಸ, ಸಂಸೆ, ಬಾಳೆಹೊಳೆ, ಬಸರಿ ಕಟ್ಟೆ, ತನಿಕೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳಸ ಬಳಿ ಇರುವ ಹೆಬ್ಬಾಳೆ ಸೇತುವೆ ಮುಳುಗಡೆಯ ಹಂತ ತಲುಪಿದ್ದು, ನಾಲ್ಕರಿಂದ ಐದು ಅಡಿಗಳು ನೀರು ಹೆಚ್ಚಳವಾದರೇ ಸೇತುವೆ ಮೇಲಿಂದ ನೀರು ಹರಿಯುವ ಸಾಧ್ಯತೆ ಇದೆ.