ಕರ್ನಾಟಕ

karnataka

ETV Bharat / state

ಮರಗಳ ಸಾಗಣೆಯಿಂದ ಭೂಕುಸಿತ ಭೀತಿ: ಟಿಂಬರ್ ಮಾಫಿಯಾಕ್ಕೆ ಬ್ರೇಕ್ ಹಾಕುವಂತೆ ಆಗ್ರಹ - ಟಿಂಬರ್ ಮಾಫಿಯಾ

ಬೆಟ್ಟಗುಡ್ಡಗಳ ಕುಸಿತಕ್ಕೆ ಎಗ್ಗಿಲ್ಲದೇ ಮರಗಳನ್ನ ಕಡಿದು ಜೆಸಿಬಿ - ಹಿಟಾಚಿಗಳಲ್ಲಿ ಕೆಲಸ ಮಾಡಿದ್ದೇ ಕಾರಣ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದರು. ಹಾಗಾಗಿ ಮಳೆಗಾಲ ಮುಗಿಯುವವರೆಗೆ ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಬೇಕು ಎಂದು ಚಿಕ್ಕಮಗಳೂರಿನ ಜನರು ಆಗ್ರಹಿಸಿದ್ದಾರೆ.

Chikkamagaluru
ಟಿಂಬರ್

By

Published : Jun 25, 2022, 8:02 AM IST

ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಅಬ್ಬರಕ್ಕೆ ಕಾಫಿನಾಡು ಅಕ್ಷರಶಃ ಕಂಗಾಲಾಗಿದೆ. ಎಲ್ಲೆಂದರಲ್ಲಿ ಬೆಟ್ಟ-ಗುಡ್ಡ ಕುಸಿತ, ರಸ್ತೆ ಕುಸಿತದಿಂದ ಮಲೆನಾಡ ಜನ ಜೀವನವೇ ಅಸ್ತವ್ಯಸ್ತವಾಗಿತ್ತು. ಆದರೆ, ಜನರಿಗೆ ಆ ಭೀತಿ ಇನ್ನೂ ಹೋಗಿಲ್ಲ. ಬೆಟ್ಟಗುಡ್ಡಗಳ ಕುಸಿತಕ್ಕೆ ಎಗ್ಗಿಲ್ಲದೇ ಮರಗಳನ್ನ ಕಡಿದು ಜೆಸಿಬಿ - ಹಿಟಾಚಿಗಳಲ್ಲಿ ಕೆಲಸ ಮಾಡಿದ್ದೇ ಕಾರಣವೆಂದು ಹೇಳಲಾಗಿತ್ತು. ಈ ವರ್ಷವೂ ಜನವರಿಯಿಂದಲೇ ಮಳೆ ಆರಂಭವಾಗಿದ್ದು, ಆತಂಕದಿಂದಿರುವ ಜನ ಮಳೆಗಾಲ ಮುಗಿಯುವವರೆಗೆ ಟಿಂಬರ್ ಸಾಗಣೆಗೆ ಬ್ರೇಕ್ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕುವಂತೆ ಆಗ್ರಹ..

ಸರ್ಕಾರಕ್ಕೆ ಮಲೆನಾಡಿಗರ ಮನವಿ:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಕಳಸ, ಕೊಪ್ಪ, ಚಿಕ್ಕಮಗಳೂರು ತಾಲೂಕಿನ ಕೆಲಭಾಗದಲ್ಲಿ ಮರಗಳನ್ನ 8-10-12 ಚಕ್ರದ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಜನವರಿಯಿಂದ ಆಗಿಂದಾಗ್ಗೆ ಮಳೆ ಬಂದು ಕೆರೆಕಟ್ಟೆಗಳು ತುಂಬಿವೆ. ಈಗ ಮುಂಗಾರು ಆರಂಭವಾಗಿದೆೆ.

ಕೆಲ ಭಾಗ ಉತ್ತಮ ಮಳೆ ಸುರಿಯುತ್ತಿದೆ. ಲಾರಿಗಳ ನಿರಂತರ ಸಂಚಾರದಿಂದ ಮತ್ತೆ ಬೆಟ್ಟ-ಗುಡ್ಡ-ರಸ್ತೆ ಕುಸಿಯುವ ಪರಿಸ್ಥಿತಿ ಬರಬಹುದು. ಹಾಗಾಗಿ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ, ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಣೆ ಮಾಡಲು ಅನುಮತಿ ನೀಡದಂತೆ ಮಲೆನಾಡಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸೇತುವೆ ಬಿರುಕು ಸಾಧ್ಯತೆ:ಮಳೆಗಾಲದಲ್ಲಿ ಭಾರೀ ಗಾತ್ರದ ಮರಗಳನ್ನ ಕಡಿಯುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡ-ರಸ್ತೆಗಳು ಬಿರುಕು ಬಿಡುವ ಸಾಧ್ಯತೆ ಇದೆ. ಬೆಟ್ಟ-ಗುಡ್ಡ-ಭೂಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ, ಅತ್ಯಂತ ತೂಕದ ಕಾಡು ಜಾತಿಯ ಮರಗಳನ್ನ ದೊಡ್ಡ-ದೊಡ್ಡ ಲಾರಿಗಳಲ್ಲಿ ಸಾಗಿಸುವುದು ಅಪಾಯವನ್ನ ಆಹ್ವಾನಿಸಿದಂತೆ. ಇದರಿಂದ ರಸ್ತೆಗಳು ಡ್ಯಾಮೇಜ್ ಆಗಬಹುದು. ಗ್ರಾಮೀಣ ಭಾಗದ ಸಣ್ಣ-ಸಣ್ಣ ಸೇತುವೆಗಳು ಕೂಡ ಬಿರುಕು ಬಿಡಬಹುದು ಎಂಬುದು ಮಲೆನಾಡಿಗರ ಅಭಿಪ್ರಾಯ.

ಮಳೆಗಾಲದಲ್ಲಿ ಪ್ರಕೃತಿ ಮಧ್ಯೆ ಕೆಲಸ ಮಾಡುವುದು ಮತ್ತಷ್ಟು ಅಪಾಯಕಾರಿ. ಹಾಗಾಗಿ, ಮಳೆಗಾಲ ಮುಗಿಯುವವರೆಗೆ ಮರಗಳನ್ನ ಕಡಿಯುವುದಕ್ಕಾಗಲಿ ಅಥವ ಸಾಗಿಸುವುದಕ್ಕಾಗಲಿ ಅನುಮತಿ ನೀಡಿಬಾರದು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಅನುಮತಿ ಪಡೆದು ಸಾಗಿಸೋ ಮರಗಳನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಈಗಾಗಲೇ ವ್ಯಾಪಾರಸ್ಥರಿಗೆ ಸೂಚನೆ ನೀಡಿದೆ.

ಇದರ ಮಧ್ಯೆಯೂ ಟಿಂಬರ್ ಸಾಗಾಟ ನಿಂತಿಲ್ಲ. ಅನುಮತಿ ಇಲ್ಲದೇ ಸಾಗಿಸುವ ಸ್ವೀಲರ್ ಮರಗಳನ್ನ ಕಡಿಯೋದನ್ನ ನಿಲ್ಲಿಸಲು ಜಿಲಾಧಿಕಾರಿಗಳು ಆದೇಶಿಸಬೇಕು ಎಂದು ಚಿಕ್ಕಮಗಳೂರು ಅರಣ್ಯ ಇಲಾಖೆ ಡಿಎಫ್ಒ ಕ್ರಾಂತಿ ಹೇಳಿದರು.

ಇದನ್ನೂ ಓದಿ:ಗ್ರಾಮೀಣ ಪ್ರತಿಭೆ ತಯಾರಿಸಿದ ವಿದ್ಯುತ್ ಚಾಲಿತ ವಾಹನದಲ್ಲಿ ಸಚಿವ ನಾಗೇಶ್ ಜಾಲಿರೈಡ್

ABOUT THE AUTHOR

...view details