ಕರ್ನಾಟಕ

karnataka

ETV Bharat / state

ಪ್ರೇಮಿಗಳ ದಿನವನ್ನು ಭಿನ್ನವಾಗಿ, ಅರ್ಥಪೂರ್ಣವಾಗಿ ಆಚರಿಸಿದ ವಿದ್ಯಾರ್ಥಿಗಳು - ಚಿಕ್ಕಮಗಳೂರು ಎಬಿವಿಪಿ ಕಾರ್ಯಕರ್ತರು

ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುವ ಫೆಬ್ರವರಿ 14ರ ಇಂದಿನ ದಿನವನ್ನು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಕೊಂಚ ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಿದರು.

IDSG college students celebrated valentines day very meaningfully
ಪ್ರೇಮಿಗಳ ದಿನವನ್ನು ಭಿನ್ನವಾಗಿ, ಅರ್ಥಪೂರ್ಣವಾಗಿ ಆಚರಿಸಿದ ಐಡಿಎಸ್​ಜಿ ದೇಶಪ್ರೇಮಿಗಳು

By

Published : Feb 14, 2020, 8:18 PM IST

ಚಿಕ್ಕಮಗಳೂರು: ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುವ ಫೆಬ್ರವರಿ 14ರ ಇಂದಿನ ದಿನವನ್ನು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಕೊಂಚ ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಿದರು.

ಪ್ರೇಮಿಗಳ ದಿನವನ್ನು ಭಿನ್ನವಾಗಿ, ಅರ್ಥಪೂರ್ಣವಾಗಿ ಆಚರಿಸಿದ ಐಡಿಎಸ್​ಜಿ ದೇಶಪ್ರೇಮಿಗಳು

ವಿದ್ಯಾರ್ಥಿಗಳು ಈ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಿ ಮೋಜು-ಮಸ್ತಿ ಮಾಡದೆ ಭಾರತ ಮಾತೆಯನ್ನು ಪೂಜಿಸಿ ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೇಶ ಪ್ರೇಮಿಗಳ ದಿನ ಆಚರಣೆ ಮಾಡಿದ ವಿದ್ಯಾರ್ಥಿಗಳು ಪುಲ್ವಾಮ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಎಬಿವಿಪಿ ಮುಖಂಡ ಶಶಿ, ಫೆಬ್ರವರಿ 14 ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ದಿನ. ಇದೇ ದಿನ ನಿಜವಾದ ಪ್ರೇಮಿಗಳ ದಿನಕ್ಕೆ ಅರ್ಥ ಬಂದಿದ್ದು ಎಂದರು.

ABOUT THE AUTHOR

...view details