ಚಿಕ್ಕಮಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನು ಸಚಿವ ಸ್ಥಾನವನ್ನು ಕೇಳಲು ಹೋಗುವುದಿಲ್ಲ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ: ಎಂ.ಪಿ. ಕುಮಾರಸ್ವಾಮಿ - ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ ಹೇಳಿಕೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನು ಸಚಿವ ಸ್ಥಾನವನ್ನು ಕೇಳುವುದಿಲ್ಲ, ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ: ಎಂ.ಪಿ ಕುಮಾರಸ್ವಾಮಿ ಹೇಳಿಕೆ!
ಸಿಎಂ ಯಡಿಯೂರಪ್ಪನವರು ನನಗೆ ಸಚಿವ ಸ್ಥಾನ ಕೊಟ್ಟರೆ ನಾನು ಖಂಡಿತವಾಗಿಯೂ ಅದನ್ನು ನಿಭಾಯಿಸುತ್ತೇನೆ. ಅನೇಕ ತಿಕ್ಕಾಟದ ನಡುವೆ ನಾನು ಯಡಿಯೂರಪ್ಪ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ನನ್ನನ್ನು ಯಾರು ಕೂಡ ನಿರ್ಲಕ್ಷ್ಯ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಸಿಎಂ ನನಗೆ ಸಚಿವ ಸ್ಥಾನ ಕೊಟ್ಟರೂ ಪರವಾಗಿಲ್ಲ, ಕೊಡದಿದ್ದರೂ ಪರವಾಗಿಲ್ಲ. ನನಗೆ ಶಕ್ತಿ ಕಡಿಮೆ ಇದ್ದರೆ ಮೂರು ಬಾರಿ ಮೂಡಿಗೆರೆ ತಾಲೂಕಿನ ಶಾಸಕನಾಗಿ ಆಯ್ಕೆಯಾಗುತ್ತಿದ್ದೇನಾ..? ಎಂದು ಸ್ಪಷ್ಟನೆ ನೀಡಿದರು.