ಚಿಕ್ಕಮಗಳೂರು:ನಗರದ ಪೆನ್ಷನ್ ಮೊಹಲ್ಲಾದಲ್ಲಿ ವಿವಾಹೇತರ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ನೀರಿನ ಸಂಪ್ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಸಿಮ್ರಾನ್ (22) ಕೊಲೆಯಾದ ಮಹಿಳೆ.
ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್ ಹಾಗೂ ಫೈರೋಜ್ ವಿವಾಹವಾಗಿತ್ತು. ಆತ ಇಟ್ಟುಕೊಂಡಿದ್ದ ಎನ್ನಲಾದ ವಿವಾಹೇತರ ಸಂಬಂಧ ಪ್ರಶ್ನಿಸಿದ್ದಕ್ಕೆ ಫೈರೋಜ್ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.