ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಕೆರೆ ತೂಬಿನ ಕೆಳಗೆ ಮೃತ ಪಾರಿವಾಳಗಳನ್ನು ತಂದು ಸುರಿದ ಕಿಡಿಗೇಡಿಗಳು: ಹೆಚ್ಚಿದ ಭೀತಿ - ಬಸವನಹಳ್ಳಿ ಕೆರೆ ಸತ್ತ ನೂರಾರು ಪಾರಿವಾಳಗಳು

ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸಾವನ್ನಪ್ಪಿರುವ ನೂರಾರು ಪಾರಿವಾಳಗಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

Hundreds of dead pigeons crouch down under the canopy of Basavanahalli Lake
ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳಿಂದ ಖಾಯಿಲೆ ಭೀತಿ

By

Published : Feb 6, 2020, 6:14 PM IST

ಚಿಕ್ಕಮಗಳೂರು:ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳಗಳು ಪತ್ತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಂದೇ ಜಾಗದಲ್ಲಿ ನೂರಾರು ನೂರಾರು ಮೃತ ಪಾರಿವಾಳಗಳನ್ನು ಸುರಿದು ಹೋಗಿರುವುದು ಕಂಡು ಬಂದಿದೆ. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆಯ ಮೇಲ್ವಿಚಾರಕರು, ಸತ್ತ ಪಾರಿವಾಳಗಳು ಕೊಳೆತು ಕೆರೆಯ ನೈರ್ಮಲ್ಯ ನಾಶವಾಗುವುದಲ್ಲದೇ, ರೋಗ ರುಜಿನಗಳು ಹರಡುತ್ತವೆ ಎಂದು ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.

ಮೃತಪಟ್ಟಿರುವ ನೂರಾರು ಪಾರಿವಾಳಗಳನ್ನು ಯಾರು ಇಲ್ಲಿಗೆ ತಂದು ಎಸೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅದು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಭರವಸೆಯನ್ನು ಎಸ್​ಪಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details