ಚಿಕ್ಕಮಗಳೂರು:ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಿನ್ನೆಲೆ, ಎಂ.ಜಿ.ರಸ್ತೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದರು. ಇಂದು ಮಧ್ಯಾಹ್ನ ನಗರದ ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ.ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಬೃಹತ್ ಶೋಭಾಯಾತ್ರೆ ಜರುಗಲಿದೆ.
ಮಂಗಳವಾರ ಸಂಕೀರ್ತನೆ ಯಾತ್ರೆ ನೆರವೇರಿತು. ಈ ವೇಳೆ ದತ್ತಪೀಠಕ್ಕೆ ತೆರಳುವ ಮಾರ್ಗಗಳಲ್ಲಿ ಮೊಳೆಗಳು ಪತ್ತೆಯಾಗಿದೆ. ಕಿಡಿಗೇಡಿಗಳು ಮೊಳೆ ಹಾಕಿರುವ ಆರೋಪ ಕೇಳಿ ಬಂದಿದೆ. ಮೊಳೆ ಪತ್ತೆಯಾಗುತ್ತಿದ್ದಂತೆ ಸಂಜೆ ಕಾಫಿನಾಡಿಗೆ ಎಡಿಜಿಪಿ ಅಲೋಕ್ ಕುಮಾರ್ ಆಗಮಿಸಿದ್ದು, ಸಂಜೆ ದತ್ತ ಪೀಠಕ್ಕೂ ಭೇಟಿ ನೀಡಿದ್ದರು.