ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ರಾತ್ರಿ 10.30ರ ವೇಳೆಗೆ ಭೂಮಿಯಿಂದ ಭಾರೀ ಶಬ್ದ ಕೇಳಿ ಬಂದು ಲಘು ಭೂಕಂಪನದ ಅನುಭವ ಆಗಿದೆ ಎನ್ನಲಾಗಿದೆ.
ಮೂಡಿಗೆರೆಯಲ್ಲಿ ಭೂಮಿಯೊಳಗಿಂದ ಕೇಳಿ ಬಂತು ಭಾರೀ ಸದ್ದು: ಗಾಬರಿಗೊಂಡು ಮನೆಯಿಂದ ಹೊರ ಬಂದ ಜನ! - ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕಂಪನದ ಅನುಭವ
ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಭೂಮಿಯೊಳಗಿನಿಂದ ಭಾರೀ ಸದ್ದು
ಮನೆ ಗೋಡೆಯಲ್ಲಿ ಬಿರುಕು ಬಿಟ್ಟಿದ್ದು, ಭೂಕಂಪ ಸಂಭವಿಸಿದೆ ಎಂಬ ಅನುಮಾನ ಇಲ್ಲಿನ ಜನರನ್ನು ಕಾಡುತ್ತಿದೆ. ಬಣಕಲ್ನ ಸುಭಾಷ್ ನಗರದಲ್ಲಿ ಭೂ ಕಂಪನದ ಅನುಭವಾಗುತ್ತಿದ್ದಂತೆ ಮನೆಯಿಂದ ಜನರು ಹೊರ ಬಂದಿದ್ದಾರೆ.
ಮನೆಯ ಒಳಗೆ ಕುರ್ಚಿ ಮೇಲೆ ಕುಳಿತವರಿಗೆ ಹಾಗೂ ಗೋಡೆ ಪಕ್ಕದಲ್ಲಿ ಇದ್ದವರಿಗೆ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಈ ಭಾಗದಲ್ಲಿ ಭೂ ಕುಸಿತವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಈ ಬಾರಿ ಕೂಡ ಭೂಮಿ ನಡುಗಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
TAGGED:
Huge noise from earth