ಕರ್ನಾಟಕ

karnataka

ETV Bharat / state

ಮುಡುಬ ಸೇತುವೆಯಿಂದ ತುಂಗಾ ನದಿಗೆ ಹಾರಿ ಹೊಸ ನಗರ ತಾಲೂಕಿನ ಆಹಾರ ನಿರೀಕ್ಷಕ ಆತ್ಮಹತ್ಯೆ

ಹೊಸಗನರ ತಾಲ್ಲೂಕು ಕಚೇರಿಯ ಆಹಾರ ನಿರೀಕ್ಷಕ ದತ್ತಾತ್ರೇಯ (60) ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುಡುಬ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

By

Published : Dec 8, 2019, 5:17 AM IST

suicide
suicide

ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುಡುಬ ಸೇತುವೆ ಮೇಲಿಂದಾ ತುಂಗಾ ನದಿಗೆ ಹಾರಿ ಶಿವಮೊಗ್ಗದ ಹೊಸ ನಗರ ತಾಲ್ಲೂಕಿನ ಆಹಾರ ನಿರೀಕ್ಷಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೊಸಗನರ ತಾಲ್ಲೂಕು ಕಚೇರಿಯ ಆಹಾರ ನಿರೀಕ್ಷಕ ದತ್ತಾತ್ರೇಯ (60) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯಾಗಿದ್ದು 2 ತಿಂಗಳ ನಂತರ ಇವರು ನಿವೃತ್ತಿಯಾಗಲಿದ್ದರು. ಭದ್ರಾವತಿ ತಾಲ್ಲೂಕಿನ ಕೆಂಚನಹಳ್ಳಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದ ದತ್ತಾತ್ರೇಯ ಇಂದೂ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದರು. 10 ಗಂಟೆಯ ಹೊತ್ತಿಗೆ ಪತ್ನಿ ಅನುಸೂಯ ಅವರಿಗೆ ದೂರವಾಣಿ ಕರೆ ಮಾಡಿ ನಾನು ಎನ್ ಆರ್ ಪುರ ತಾಲೂಕಿನ ಮುಡುಬ ಸೇತುವೆ ಪಕ್ಕದಲ್ಲಿದ್ದು ಕೂಡಲೇ ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ದತ್ತಾತ್ರೇಯ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳ

ಕೂಡಲೇ ಗಾಬರಿಯಿಂದ ಪತ್ನಿ ಹಾಗೂ ಮಕ್ಕಳು ಮುಡುಬ ಸೇತುವೆ ಸಮೀಪಕ್ಕೆ ಬಂದಿದ್ದಾರೆ. ಅವರು ಬರುವ ವೇಳೆಗಾಗಲೆ ದತ್ತಾತ್ರೇಯ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಡುಬ ಸೇತುವೆ ಎನ್.ಆರ್ ಪುರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗಡಿ ಭಾಗದಲ್ಲಿ ಬರುವ ಕಾರಣ ಆತ್ಮಹತ್ಯೆ ಮಾಡಿಕೊಂಡ ಜಾಗವು ಎನ್.ಆರ್.ಪುರ ತಾಲ್ಲೂಕಿಗೆ ಸೇರುವುದರಿಂದ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ದತ್ತಾತ್ರೇಯ ಅವರ ಪತ್ನಿ ಎನ್.ಆರ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಹೊಸನಗರದ ತಹಶೀಲ್ದಾರ್ ಮತ್ತು ಇತರರು ತಮ್ಮ ಪತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದೂ ಆರೋಪ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಎನ್.ಆರ್ ಪುರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details