ಚಿಕ್ಕಮಗಳೂರು: ಚಿಕ್ಕಮಗಳೂರಿನ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿರುವ ತುಂಗಾ, ಭದ್ರಾ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ತುಂಬಿ ಹರಿಯುತ್ತಿವೆ ತುಂಗಾ, ಭದ್ರಾ, ನೇತ್ರಾವತಿ...ಹೊರನಾಡು-ಕಳಸ ಸಂಪರ್ಕ ಬಂದ್ - ಹೊರನಾಡು - ಕಳಸ ಸಂಪರ್ಕ ಬಂದ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ, ಭದ್ರಾ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಹೊರನಾಡು - ಕಳಸ ಸಂಪರ್ಕ ಬಂದ್ ಆಗಿದೆ.
ಹೊರನಾಡು - ಕಳಸ ಸಂಪರ್ಕ ಬಂದ್
ಇದೇ ಮೊದಲ ಬಾರಿಗೆ ಕಳಸ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ನಿರಂತರವಾಗಿ ನಾಲ್ಕು ದಿನಗಳ ಕಾಲ ಸೇತುವೆ ಮುಳುಗಡೆಯಾಗಿದ್ದು, ಕಂಡು ಕೇಳರಿಯದ ಮಳೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ.
ನದಿಯ ಅಕ್ಕ ಪಕ್ಕದ 1 ಕಿಲೋ.ಮೀಟರ್ಗೂ ಅಧಿಕ ಪ್ರದೇಶದಲ್ಲಿ ಭದ್ರಾ ನದಿ ನೀರು ಆವರಿಸಿಕೊಂಡಿದ್ದು, ಹೊರನಾಡು - ಕಳಸ ಸಂಪರ್ಕ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದೆ.