ಚಿಕ್ಕಮಗಳೂರು: ಜಿಲ್ಲೆಗೆ ಆಗಮಿಸಿದ ನೂತನ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ಶ್ರೀ ಅವಧೂತ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದು, ಆಶೀರ್ವಾದ ಪಡೆದರು.
ವಿನಯ್ ಗುರೂಜಿ ಆಶ್ರಮಕ್ಕೆ ಗೃಹ ಸಚಿವ ಆರಗ ಭೇಟಿ: ಪೂಜೆ ವೇಳೆ ಪ್ರಸಾದ ನೀಡಿದ ಚಾಮುಂಡೇಶ್ವರಿ! - Chikkamagaluru Latest News
ಗೃಹ ಸಚಿವ ಆರಗ ಜ್ಞಾನೇಂದ್ರ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ಶ್ರೀ ಅವಧೂತ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ತಾಯಿ ಚಾಮುಂಡೇಶ್ವರಿ ಪ್ರಸಾದ ನೀಡಿದ್ದಾರೆ.
![ವಿನಯ್ ಗುರೂಜಿ ಆಶ್ರಮಕ್ಕೆ ಗೃಹ ಸಚಿವ ಆರಗ ಭೇಟಿ: ಪೂಜೆ ವೇಳೆ ಪ್ರಸಾದ ನೀಡಿದ ಚಾಮುಂಡೇಶ್ವರಿ! araga-jnanendra](https://etvbharatimages.akamaized.net/etvbharat/prod-images/768-512-12708311-thumbnail-3x2-mng.jpg)
ಆಶ್ರಮಕ್ಕೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ
ಆಶ್ರಮಕ್ಕೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ
ಈ ವೇಳೆ ವಿನಯ್ ಗುರೂಜಿ ಅವರು ಸಹ ನೂತನ ಸಚಿವರನ್ನು ವಿನಯ ಪೂರ್ವಕವಾಗಿ ಬರಮಾಡಿಕೊಂಡರು.
ಸಚಿವ ಭೇಟಿ ನೀಡಿದಾಗ ಆಶ್ರಮದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವರ ತಲೆಯ ಮೇಲಿಂದ ಹೂವು ಪ್ರಸಾದದ ರೂಪದಲ್ಲಿ ಕೆಳಗೆ ಬಿದ್ದಿದ್ದು, ಆ ಹೂವನ್ನು ಆರಗ ಜ್ಞಾನೇಂದ್ರ ಅವರ ಕೊರಳಿಗೆ ವಿನಯ್ ಗುರೂಜಿಯವರು ಹಾಕಿದರು.
Last Updated : Aug 8, 2021, 10:27 AM IST