ಚಿಕ್ಕಮಗಳೂರು:ಬೆಂಗಳೂರಿನಲ್ಲಿ ತಲೆದೋರುತ್ತಿರುವ ಅಕ್ರಮ ವಲಸಿಗರ ಸಮಸ್ಯೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಮಸ್ಯೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಹಲವಾರು ವಲಸಿಗರು ಉದ್ದೇಶಪೂರ್ವಕವಾಗಿಯೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ಳುತ್ತಾರೆ. ಈ ಪ್ರಕರಣ ಇತ್ಯರ್ಥ ಆಗುವುದರೊಳಗೆ ಅವರು ಹೊರಗೆ ಹೋಗುವ ಹಾಗಿಲ್ಲ. ಹಾಗಾಗಿ ಇಲ್ಲೇ ನೆಲೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಯಾರ ವೀಸಾ ಅವಧಿ ಮುಗಿದಿದೆಯೋ ಅವರನ್ನು ಅರೆಸ್ಟ್ ಮಾಡಬೇಕು ಅಥವಾ ಗಡಿಪಾರು ಮಾಡಬೇಕು ಅಂತ ಹೇಳಿದ್ದೇನೆ. ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಮಸ್ಯೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ಅದನ್ನು ನಿಭಾಯಿಸಲು ಸರಿಯಾದ ವ್ಯವಸ್ಥೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಕೊರೊನಾವನ್ನು ಧೈರ್ಯದಿಂದ ಎದುರಿಸುವ ಮನಃಶಕ್ತಿ ಬೇಕು: ನಟಿ ಭಾವನಾ