ಕರ್ನಾಟಕ

karnataka

By

Published : Nov 1, 2021, 1:06 PM IST

ETV Bharat / state

'MES' ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ ಕಾರ್ಪೊರೇಷನ್ ಬಿಜೆಪಿ ಹಿಡಿತಕ್ಕೆ ಬಂದಿದೆ. ಜನರು ಎಂಇಎಸ್ ಸಂಘಟನೆಯನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು:ಬೆಳಗಾವಿಯಲ್ಲಿ ಎಂ.ಇ.ಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅವರಿಗೆ (ಎಂ.ಇ.ಎಸ್) ಅದೇ ಜೀವಾಳ. ಪದೇ-ಪದೇ ಅಂತಹ ಕೆಲಸ ಮಾಡುತ್ತಿದ್ದಾರೆ. ಹಾಗೇ ಮಾಡಿಯೇ ಆ ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ ಎಂದರು.

ಎಂಇಎಸ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಭಾಷೆ ಬಗ್ಗೆ ಭಾವೋದ್ವೇಗ ಉಂಟು ಮಾಡಿ ಚುನಾವಣೆ ಗೆಲ್ಲಬಹುದು, ರಾಜಕಾರಣ ಮಾಡಬಹುದು ಎಂದು ಭಾವಿಸಿದ್ದಾರೆ. ಎಂ.ಇ.ಎಸ್​​ಗೆ ಜನತೆ ಇತಿಶ್ರೀ ಹಾಡಿದ್ದಾರೆ. ಬೆಳಗಾವಿ ಕಾರ್ಪೊರೇಷನ್ ಬಿಜೆಪಿ ಹಿಡಿತಕ್ಕೆ ಬಂದಿದೆ. ಜನರು ಎಂಇಎಸ್ ಮೂಲೆ ಗುಂಪು ಮಾಡಿದ್ದಾರೆ ಎಂದರು.

ಐದಾರು ದಿನದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ:ಐದಾರು ದಿನದಲ್ಲಿ ಪುನೀತ್ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಐದಾರು ದಿನದಲ್ಲಿ ಎಲ್ಲಾ ಕೆಲಸ ಮುಗಿಸುತ್ತೇವೆ. ಕುಟುಂಬದವರಿಂದ ಎಲ್ಲಾ ವಿಧಿ-ವಿಧಾನ ಮುಗಿಯಬೇಕು. ಇಲ್ಲವಾದರೆ, ಅಭಿಮಾನಿಗಳು ಮುಗಿಬೀಳುತ್ತಾರೆ. ಮಣ್ಣನ್ನೂ ಎತ್ತಿಕೊಂಡು ಹೋಗ್ತಾರೆ. ಕುಟುಂಬದವರನ್ನು ಕೇಳಿ, ಬೇಲಿ ಹಾಕಿ ಆಮೇಲೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:MES ಪುಂಡರಿಗೆ ಬೆಳಗಾವಿ ಪೊಲೀಸರ ಮೂಗುದಾರ.. ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'..

ABOUT THE AUTHOR

...view details