ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಳೆದ ವರ್ಷ ನಿರ್ಮಿಸಿದ ಮನೆಯೊಂದು ಬೀಳುವ ಹಂತಕ್ಕೆ ತಲುಪಿದೆ.
ಧಾರಾಕಾರ ಮಳೆಗೆ ಕೊಚ್ಚಿಹೋದ ಅಡಿಪಾಯ: ಸಾಲ ಮಾಡಿ ಕಟ್ಟಿದ ಮನೆ ಬೀಳುವ ಹಂತದಲ್ಲಿ - ಚಿಕ್ಕಮಗಳೂರಿನಲ್ಲಿ ಭಾರೀ ಮಳೆ
ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಛತ್ರ ಮೈದಾನದಲ್ಲಿ ಕಳೆದ ವರ್ಷ ಕಟ್ಟಿದ ಮನೆಯೊಂದು ಕುಸಿಯುವ ಹಂತಕ್ಕೆ ಬಂದಿದೆ.

ಕುಸಿಯುವ ಹಂತದಲ್ಲಿ ಮನೆ
ನಗರದಲ್ಲಿ ಮಳೆ ಹಾಗೂ ಗಾಳಿಯ ಅಬ್ಬರ ಜೋರಾಗಿದ್ದು, ಛತ್ರ ಮೈದಾನದಲ್ಲಿ ಇರುವ ಈ ಮನೆಯ ಅಡಿಪಾಯವೇ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ.
ಕುಸಿಯುವ ಹಂತದಲ್ಲಿ ಮನೆ
ನಾಗಮ್ಮ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಈ ಮನೆಗೆ ಗೃಹ ಪ್ರವೇಶ ಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ. ಸಾಲ ಮಾಡಿ ಕಟ್ಟಿದ ಮನೆಯ ಪರಿಸ್ಥಿತಿ ನೋಡಿ ಒಡತಿ ನಾಗಮ್ಮ ಕಣ್ಣೀರು ಹಾಕುತ್ತಿದ್ದಾರೆ.