ಕರ್ನಾಟಕ

karnataka

ETV Bharat / state

ಅವರು ಪಕ್ಷ ಉಚ್ಛಾಟನೆ ಮಾಡಲೆಂದು ಕಾಯುತ್ತಿದ್ದಾರೆ.. ಜಿಟಿಡಿಗೆ ಹೆಚ್ ಕೆ ಕುಮಾರಸ್ವಾಮಿ ಟಾಂಗ್ - ಹೆಚ್.ಕೆ. ಕುಮಾರಸ್ವಾಮಿ ಲೇಟೆಸ್ಟ್​​ ನ್ಯೂಸ್

ಸಾ ರಾ ಮಹೇಶ್ ಕೂಡ ನಮ್ಮ ಪಕ್ಷದ ಶಾಸಕರು, ಜಿ ಟಿ ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ. ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ದೇವೇಗೌಡ ಅವರು ಸನ್ಮಾನ ಮಾಡಲಿ. ಅವರು ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ..

ಜಿ.ಟಿ.ದೇವೇಗೌಡ
HK Kumaraswamy

By

Published : Jan 10, 2021, 4:42 PM IST

ಚಿಕ್ಕಮಗಳೂರು :ಜಿ ಟಿ ದೇವೇಗೌಡರನ್ನು ನಾವು ಉಚ್ಛಾಟನೆ ಮಾಡ್ತೀವಿ ಎಂದು ಹೇಳಿಲ್ಲ. ಸ್ವತಃ ಅವರೇ ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಶಾಸಕ ಜಿಟಿಡಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಟಾಂಗ್

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಮುಗಿಯೋವರೆಗೆ ನಿಷ್ಠರಾಗಿ ಇರಬೇಕು. ಉಚ್ಛಾಟನೆಗೆ ಹೆದರಲ್ಲ, ಕಾರಣ ಮೆಂಬರ್ ಶಿಪ್ ಹೋಗಲ್ಲ.

ಅದಕ್ಕೆ ಅವರು ಎಲ್ಲವನ್ನೂ ಮಾತನಾಡುತ್ತಾ ಇರೋದು. ಉಚ್ಛಾಟನೆ ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ ತರಹದ ಅವಕಾಶಗಳಿವೆ. ಅವರ ಮಾತು, ರೀತಿ-ನೀತಿ ಬದ್ಧತೆ ನೋಡಿದ್ರೆ ಹಾಗೆ ಅನಿಸುತ್ತದೆ ಎಂದರು.

ಓದಿ: ದೇವನಹಳ್ಳಿ: ಮಗಳ ಮದುವೆಯಾಗು ಎಂದಿದ್ದಕ್ಕೆ ಅತ್ತೆ-ಹೆಂಡತಿಯ ಕೊಲೆ

ಸಾ ರಾ ಮಹೇಶ್ ಕೂಡ ನಮ್ಮ ಪಕ್ಷದ ಶಾಸಕರು, ಜಿ ಟಿ ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ. ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ದೇವೇಗೌಡ ಅವರು ಸನ್ಮಾನ ಮಾಡಲಿ. ಅವರು ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ.

ಅವರು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ಪಕ್ಷದ ಬಗ್ಗೆ ಪ್ರೀತಿ ಇಟ್ಕೊಂಡು ಕರೆದರೂ, ಕರೆಯದಿದ್ದರೂ ಪಕ್ಷದ ಶಾಸಕ ಬರುತ್ತೇನೆಂದು ಹೋಗಲಿ. ಅವರು ಯಾವ ಉದ್ದೇಶದಿಂದ ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದರು.

For All Latest Updates

ABOUT THE AUTHOR

...view details