ಕರ್ನಾಟಕ

karnataka

ETV Bharat / state

ಮಲೆನಾಡಿನ ಹಲವೆಡೆ ಗುಡ್ಡ ಕುಸಿತ: ಆತಂಕದಲ್ಲಿ ಜನತೆ - ಮಲೆನಾಡು ಭಾಗ

ಮಹಾಮಳೆಗೆ ನಲುಗಿ ಹೋಗಿದ್ದ ಮಲೆನಾಡು ಜನತೆ ಕಳೆದೆರಡು ದಿನಗಳಿಂದ ನಿರಾಳವಾಗಿದ್ದರು. ಆದರೆ, ಮತ್ತೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಜನರನ್ನ ಆತಂಕಕ್ಕೀಡು ಮಾಡಿದೆ.

ಮಲೆನಾಡಿನ ಹತ್ತಾರೂ ಭಾಗದಲ್ಲಿ ಗುಡ್ಡ ಕುಸಿತ: ಆತಂಕದಲ್ಲಿ ಜನತೆ

By

Published : Aug 13, 2019, 7:20 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಹಲವು ಅವಘಡಗಳು ಸಂಭವಿಸಿವೆ.

ಹೌದು, ಕಳೆದ ಎರಡೂ ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಇದರಿಂದ ಮಲೆನಾಡಿನ ಜನರು ಸ್ವಲ್ವ ನಿರಾಳರಾಗಿದ್ದರು. ಆದರೆ ಹಲವೆಡೆ ಭೂ ಕುಸಿತ ಉಂಟಾಗಿರುವುದು ಮತ್ತೆ ಜನರ ಆತಂಕಕ್ಕೆ ಕಾರಣವಾಗಿದೆ.

ಮಲೆನಾಡಿನ ಹಲವೆಡೆ ಗುಡ್ಡ ಕುಸಿತ: ಆತಂಕದಲ್ಲಿ ಜನತೆ

ಜಿಲ್ಲೆಯ ಕೊಪ್ಪ ತಾಲೂಕಿನ ಬಂಡಿಗಡಿ ಗ್ರಾಮದ ಮುನಿಯೂರು ಎಂಬಲ್ಲಿ ಮಳೆ ನಿಂತರೂ ಗುಡ್ಡ ಕುಸಿತ ಮಾತ್ರ ನಿಂತಿಲ್ಲ. ನಿಧಾನವಾಗಿ ಗುಡ್ಡ ಕುಸಿಯುತ್ತಿದ್ದು, ಹಲವೆಡೆ ಭೂಮಿ ಬಿರುಕು ಬಿಡಲು ಶುರುವಾಗಿದೆ. ಈ ಘಟನೆಯನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ABOUT THE AUTHOR

...view details