ಕರ್ನಾಟಕ

karnataka

ETV Bharat / state

ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಎಡವಟ್ಟಿನಿಂದ ಹೈರಾಣಾದ 10ಕ್ಕೂ ಹೆಚ್ಚು ಹಳ್ಳಿ ಮಂದಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೂ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ರಸ್ತೆ ಅಗೆದಿರೋ ಅಧಿಕಾರಿಗಳು ಇನ್ನೂ ಡಾಂಬರ್ ಹಾಕಿಲ್ಲ. ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಕ್ಕಾಗಿ ನಿತ್ಯ ನೂರಾರು ವಾಹನಗಳು ಓಡಾಡುವ ಈ ಮಾರ್ಗದಲ್ಲಿ 10 ಕ್ಕೂ ಹೆಚ್ಚು ಹಳ್ಳಿಗಳಿದ್ದು, ಜನರು ಕಿರಿಕಿರಿ ಅನುಭವಿಸುವಂತಾಗಿದೆ.

chikkamagaluru
ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ

By

Published : Jan 16, 2022, 2:11 PM IST

ಚಿಕ್ಕಮಗಳೂರು: ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು. ಹೀಗಿರುವಾಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲಸವನ್ನು ಸರಿಯಾಗಿ ಮಾಡದ ಕಾರಣ 10ಕ್ಕೂ ಹೆಚ್ಚು ಹಳ್ಳಿ ಜನರು ಕೆಮ್ಮುತ್ತಾ ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೂ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ರಸ್ತೆ ಅಗೆದಿರೋ ಅಧಿಕಾರಿಗಳು ಇನ್ನೂ ಡಾಂಬರ್ ಹಾಕಿಲ್ಲ. ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಕ್ಕಾಗಿ ನಿತ್ಯ ನೂರಾರು ವಾಹನಗಳು ಓಡಾಡುವ ಈ ಮಾರ್ಗದಲ್ಲಿ 10 ಕ್ಕೂ ಹೆಚ್ಚು ಹಳ್ಳಿಗಳಿವೆ.

ಹೆಚ್ಚಾಗಿ ಟೂರಿಸ್ಟ್ ವಾಹನಗಳೇ ಓಡಾಡುವ ಈ ಮಾರ್ಗದಲ್ಲಿ 10ಕ್ಕೂ ಹೆಚ್ಚಿನ ಹಳ್ಳಿಗಳು ಸಂಪೂರ್ಣ ಧೂಳಿನಲ್ಲಿ ಮುಳುಗಿವೆ. ನೂರಾರು ಜನ ಧೂಳಿನ ಖಾಯಿಲೆಗೆ ಒಳಗಾಗಿ ಮನೆಯಿಂದ ಆಚೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ

ಕೆಮ್ಮಿದ್ರೆ ಅಕ್ಕ-ಪಕ್ಕದವರು ಹತ್ತಿರ ಬರಲ್ಲ, ಆಸ್ಪತ್ರೆಗೆ ಹೋಗು ಅಂತಾರೆ. ಆಸ್ಪತ್ರೆಗೆ ಹೋದ್ರೆ ಕೊರೊನಾ ಅಂತಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎಡವಟ್ಟಿನಿಂದ ನಾವು ಹೈರಾಣಾಗಿದ್ದೇವೆ ಎಂದು ಹಳ್ಳಿಗರು ಆರೋಪಿಸಿದ್ದಾರೆ.

ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ಮಾರ್ಗದಲ್ಲಿ ಡಾಂಬರ್ ಹಾಕಿ ವಾಹನಗಳು ಓಡಾಡಲು ಅವಕಾಶ ನೀಡಿದ್ರೆ ಧೂಳು ಹೆಚ್ಚು ಬರುವುದಿಲ್ಲ. ಆದರೆ, ಅಧಿಕಾರಿಗಳು ಡಾಂಬರ್ ಕೂಡ ಹಾಕ್ತಿಲ್ಲ. ಅಷ್ಟೇ ಯಾಕೆ? ನೀರು ಸಹ ಹಾಕುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ವೇಳೆ ಧೂಳು ನಿಯಂತ್ರಣಕ್ಕಾಗಿ ರಸ್ತೆಗೆ ನಿತ್ಯ ಎರಡ್ಮೂರು ಬಾರಿ ನೀರು ಹಾಕಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಅತ್ತ ನೀರನ್ನೂ ಹಾಕುತ್ತಿಲ್ಲ. ಇತ್ತ ಡಾಂಬರ್ ಕೂಡ ಹಾಕುತ್ತಿಲ್ಲ. ಇದರಿಂದ ಹಳ್ಳಿಗರು ಹಾಸಿಗೆ ಹಿಡಿದು ಆಸ್ಪತ್ರೆಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿರುವ ಹಳ್ಳಿಗರು, ತಮ್ಮ ಮನೆಗಳ ಮುಂಭಾಗ ನಿತ್ಯ ದಿನಕ್ಕೆ ನಾಲ್ಕೈದು ಬಾರಿ ತಾವೇ ನೀರು ಹಾಕಿಕೊಳ್ಳುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಡಾಂಬರ್ ಹಾಕಿ ಅಥವಾ ದಿನಕ್ಕೆ ನಾಲ್ಕೈದು ಬಾರಿ ರಸ್ತೆಗೆ ನೀರು ಹಾಕಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details