ಕರ್ನಾಟಕ

karnataka

ETV Bharat / state

ಮೂಡಿಗೆರೆಯಲ್ಲಿ ಕುಸಿದ ಗುಡ್ಡ.. ಮನೆ ಸಹಿತ ಮಣ್ಣಿನಲ್ಲಿ ಮುಚ್ಚಿಹೋದ ಯುವಕ

ಈ ವರ್ಷದ ಭೀಕರ ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಮೂಡಿಗೆರೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತೋಟಗಳೆಲ್ಲಾ ಕೊಚ್ಚಿಹೋಗಿದ್ದು, ಚೆನ್ನಡ್ಲು ಗ್ರಾಮದ ಸಂತೋಷ ಪೂಜಾರಿ ಮಣ್ಣಿನಲ್ಲಿ ಮುಚ್ಚಿ ಸಾವನ್ನಪ್ಪಿದ್ದಾನೆ.

ಮೂಡಿಗೆರೆಯ ಮಹಾಮಳೆ

By

Published : Aug 13, 2019, 6:20 PM IST

ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ಮಹಾಮಳೆ ಜನರ ಬದುಕನ್ನೇ ಸರ್ವನಾಶ ಮಾಡಿದ್ದು, ಭೂಮಿ ಹಾಗೂ ತೋಟಗಳು ಕೊಚ್ಚಿಕೊಂಡು ಹೋಗಿದೆ. ಚೆನ್ನಡ್ಲು ಗ್ರಾಮದ ಸಂತೋಷ ಪೂಜಾರಿ ಎಂಬಾತ ಈ ಮಹಾಮಳೆಯಲ್ಲಿ ಮೃತನಾಗಿದ್ದಾನೆ.

ಮೃತ ಸಂತೋಷ ಪೂಜಾರಿ

ಮೂಡಿಗೆರೆಯ ಇಡಕಣಿ ಗ್ರಾಮದ ಪಕ್ಕದಲ್ಲಿರುವ ಚೆನ್ನಡ್ಲು ಗ್ರಾಮದಲ್ಲಿಯೂ ಗುಡ್ಡ ಕುಸಿತ ಉಂಟಾಗಿದ್ದು ಮನೆಯ ಸಹಿತ ಗ್ರಾಮದ ಯುವಕ ಸಂತೋಷ ಪೂಜಾರಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಸಂತೋಷ್​ ಗುಡ್ಡದ ಮಣ್ಣಿನಲ್ಲಿ ಮುಚ್ಚಿ ಹೋಗಿ ನಾಲ್ಕು ದಿನಗಳೇ ಕಳೆದರೂ ಆತನ ಮೃತ ದೇಹ ಮಾತ್ರ ಇನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ. ಕಾರ್ಯಚರಣೆಗೆ ಬಂದವರೆಲ್ಲಾ ಈ ಜಾಗಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಕ್ಕೆ ಹೋಗಲು ರಸ್ತೆಯೂ ಇಲ್ಲದಂತಾಗಿದೆ.

ಮೂಡಿಗೆರೆಯ ಮಹಾಮಳೆ

ಸಂತೋಷ್ ಪೂಜಾರಿ ಮೃತ ದೇಹ ಹುಡುಕಲು ಹರಸಾಹಸ ಪಡುತ್ತಿದ್ದು, ಆದಷ್ಟು ಬೇಗ ಮೃತ ದೇಹ ಹುಡುಕಿ ಕೊಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಅಧಿಕಾರಿಗಳು ಸಹ ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ ಸಂತೋಷ್​ರ ಮೃತ ದೇಹ ಯಾವ ಭಾಗದಲ್ಲಿ ಮುಚ್ಚಿ ಹೋಗಿದೆ ಎಂಬುದೇ ತಿಳಿಯುವುದು ಕಷ್ಟಕರವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ABOUT THE AUTHOR

...view details