ಕರ್ನಾಟಕ

karnataka

ETV Bharat / state

ಮೂರು ಮನೆಗಳು ಕುಸಿತ: ಮಳೆ ನಿಂತರೂ, ಮಲೆನಾಡಿಗರಿಗೆ ತಪ್ಪುತ್ತಿಲ್ಲ ಸಂಕಷ್ಟ! - ಹಲವಾರು ವಸ್ತುಗಳು ನಾಶ

ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಸುರಿದು, ಈಗ ಕೊಂಚ ಬಿಡುವು ನೀಡಿದೆ ಮಳೆ. ಆದ್ರೆ ವರುಣನ ಆರ್ಭಟದ ಪ್ರಭಾವ ಈಗ ಒಂದೊಂದು ಪ್ರದೇಶಗಳಲ್ಲಿ ನಾನಾ ರೀತಿಯಲ್ಲಿ ಗೋಚರವಾಗುತ್ತಿದೆ. ಎನ್ ಆರ್ ಪುರ ತಾಲೂಕಿನ ಬಂಡಿಗಡಿ ಗ್ರಾಮದಲ್ಲಿ ಮೂರು ಮನೆಗಳು ವಾತಾವರಣಕ್ಕೆ ಕುಸಿದು ಬಿದ್ದಿವೆ. ಇದೀಗ ಜನರು ತಮ್ಮ ಸೂರುಗಳಗನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಮಳೆ ಹೋದರೂ..ಹೋಗುತ್ತಿಲ್ಲ ಮಲೆನಾಡಿಗರಿಗೆ ಸಂಕಷ್ಟ

By

Published : Aug 23, 2019, 7:20 PM IST

ಚಿಕ್ಕಮಗಳೂರು:ಎನ್ ಆರ್ ಪುರ ತಾಲೂಕಿನ ಬಂಡಿಗಡಿ ಗ್ರಾಮದಲ್ಲಿ ಈವರೆಗೆ ಸುರಿದಿರುವ ಮಳೆಯಿಂದ ನೆಂದಿದ್ದ ಮೂರು ಮನೆಗಳು ಇಂದು ಕುಸಿದಿವೆ. ಮಹಾ ಮಳೆ ನಿಂತರೂ ಸಹ ಅದರ ದುಷ್ಪರಿಣಾಮಗಳು ಮಾತ್ರ ಕಡಿಮೆಯಾಗಿಲ್ಲ.

ಮಳೆ ನಿಂತರೂ, ಮಲೆನಾಡಿಗರಿಗೆ ತಪ್ಪದ ಸಂಕಷ್ಟ

ಮೆನಗಳು ಕುಸಿದಿದ್ದರಿಂದ ಹಲವಾರು ವಸ್ತುಗಳು ನಾಶವಾಗಿದ್ದು, ಮುಂದೆ ನಮ್ಮ ಗತಿ ಏನಪ್ಪಾ ಎನ್ನುತ್ತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ನಿರಾಶ್ರಿತರ ಸ್ಥಿತಿ. ಮಳೆ ಬಂದರೂ ಒಂದು ರೀತಿಯ ಸಮಸ್ಯೆ, ಮಳೆ ನಿಂತ ಮೇಲೆ ಮತ್ತೊಂದು ರೀತಿಯ ಸಮಸ್ಯೆಯಿಂದ ಜನರು ನರಳುತ್ತಿದ್ದಾರೆ.ಏನು ಮಾಡದಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ABOUT THE AUTHOR

...view details