ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೂ ಕುಸಿತದ ಪ್ರಕರಣಗಳು ಮುಂದುವರೆದಿವೆ. ಸಂಜೆ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾದರೂ ಕೂಡ ಮೇಲಿಂದ ಮೇಲೆ ಭೂ ಕುಸಿತ ಉಂಟಾಗುತ್ತಲೇ ಇದೆ.
ಮಲೆನಾಡಿನಲ್ಲಿ ಮುಂದುವರಿದ ಮಳೆ... ಜನರಲ್ಲಿ ಹೆಚ್ಚಿದ ಆತಂಕ! - Rain
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೂ ಕುಸಿತದ ಪ್ರಕರಣಗಳು ಮುಂದುವರಿದಿವೆ. ಸಂಜೆ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾದರೂ ಕೂಡ ಮೇಲಿಂದ ಮೇಲೆ ಭೂ ಕುಸಿತ ಉಂಟಾಗುತ್ತಲೇ ಇದೆ.
ದಿನೇ ದಿನೇ ಮಳೆಯಿಂದಾಗಿ ಮಲೆನಾಡಿಗರ ಆತಂಕ ಕೂಡ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಸುಧೀರ್ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ಸಂಪೂರ್ಣವಾಗಿ ಕುಸಿದಿದ್ದು, ತೋಟದ ಮಾಲೀಕ ಮತ್ತಷ್ಟು ಆತಂಕಕ್ಕೀಡಾಗಿದ್ದಾನೆ. ಎತ್ತರದ ಪ್ರದೇಶದಲ್ಲಿ ಭೂ ಕುಸಿತ, ಬೆಟ್ಟ ಗುಡ್ಡ ಕುಸಿತ ಸಾಮಾನ್ಯವಾಗಿದೆ.
ಆದರೆ ಸಮತಟ್ಟಾದ ಪ್ರದೇಶದಲ್ಲೂ ಭೂ ಕುಸಿತ ಉಂಟಾಗುತ್ತಿರುವ ಕಾರಣ ಮಲೆನಾಡಿಗರು ನೆಮ್ಮದಿ ಕಳೆದುಕೊಂಡಿದ್ದಾರೆ. ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ನೋಡುತ್ತಿರುವ ಮಲೆನಾಡಿನ ಜನರು ಅಳಿದುಳಿದ ಮನೆ, ಆಸ್ತಿ-ಪಾಸ್ತಿಯೂ ಕೊಚ್ಚಿ ಹೋಗುತ್ತೆಂದು ಚಿಂತಾಕ್ರಾಂತರಾಗಿದ್ದಾರೆ.