ಕರ್ನಾಟಕ

karnataka

ETV Bharat / state

ಭಾರೀ ಮಳೆಗೆ ಕುಸಿದು ಬಿದ್ದ ಮನೆ: ಸ್ಥಳಕ್ಕೆ ಶಾಸಕ ಟಿ.ಡಿ. ರಾಜೇಗೌಡ ಭೇಟಿ..! - Heavy rain in chikkamagaluru

ಭಾರೀ ಮಳೆಯಿಂದಾಗಿ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕ ಟಿ.ಡಿ. ರಾಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Heavy rain in chikkamagaluru
ಭಾರೀ ಮಳೆಗೆ ಕುಸಿದು ಬಿದ್ದ ಮನೆ

By

Published : Oct 14, 2020, 1:54 AM IST

ಚಿಕ್ಕಮಗಳೂರು: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಮಲೆನಾಡಿನ ಜನರು ಕಂಗಾಲಾಗಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದ ರತ್ನಮ್ಮ ನಾಗಪ್ಪಗೌಡ ಎಂಬುವವರ ಮನೆಯು ಕುಸಿದು ಬಿದ್ದಿದೆ. ಪರಿಣಾಮ ಮನೆಯ ಮಂದಿ ಬೀದಿಗೆ ಬರುವಂತಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಶೃಂಗೇರಿಯ ಶಾಸಕ ಟಿ.ಡಿ. ರಾಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details