ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ನೂರಾರು ಮನೆಗಳು ಕುಸಿದು ಬಿದ್ದ ಪರಿಣಾಮ ಜನರು ಬೀದಿಗೆ ಬಂದಿದ್ದಾರೆ.
ಧಾರಾಕಾರ ಮಳೆಗೆ ಕಾಫಿನಾಡು ತತ್ತರ.. ಬೀದಿಗೆ ಬಂದ ಬದುಕು - Chikkamgaluru flood
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.
ಧಾರಾಕಾರ ಮಳೆ
ಕುಸಿದ ಬೆಟ್ಟಗಳ ಪಕ್ಕದಲ್ಲಿಯೇ ಮನೆಗಳು ಕುಸಿಯುತ್ತಿದ್ದು, ಮಳೆ ಹೆಚ್ಚಾದಂತೆ ಮಲೆನಾಡ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಹೆಚ್ಚು ಅನಾಹುತಗಳು ನಡೆಯುತ್ತಿವೆ. ಸುಂದರಬೈಲು ಹಾಗೂ ಚೆನ್ನಡಲು ಗ್ರಾಮದ ಜನರಲ್ಲಿ ಆತಂಕ ಹೆಚ್ಚಿದೆ.