ಚಿಕ್ಕಮಗಳೂರು: ಮಲೆನಾಡಲ್ಲಿ ಸುರಿದ ಮಳೆಗೆ ಹಳ್ಳ -ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಮಲೆನಾಡಿಗರ ಬದುಕು ಬರಿದಾಗಿದೆ. ಇರೋಕೆ ಸೂರು ಇಲ್ಲದ್ದಂತೆ ಎಲ್ಲ ಜಾಗವನ್ನು ವರುಣ ಕಿತ್ತುಕೊಂಡು ಹೋಗಿದ್ದಾನೆ. ಅಂದು ದುಡಿದು ಅಂದೇ ತಿನ್ನೋ ಮಲೆನಾಡಿನ ಸಾವಿರಾರು ಜನ ಇದೀಗ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಕಾಫಿ ನಾಡಲ್ಲಿ ವರುಣನ ಆರ್ಭಟ: ಸಂಕಷ್ಟದಲ್ಲಿ ಜನತೆ - flood in chikkamagalur
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ರುದ್ರನರ್ತನಕ್ಕೆ ನೂರಾರು ಮನೆಗಳು ಮಣ್ಣು ಪಾಲಾಗಿವೆ. ನಿರಂತರ ಮಳೆಯಿಂದ ಹೊಲ-ಗದ್ದೆ, ತೋಟಗಳು ನೀರು ಪಾಲಾಗಿದೆ. ಮಲೆನಾಡು ಜನರ ಆಸೆ ಜಲ ರಾಕ್ಷಸನ ಒಡಲು ಸೇರಿ ಹೋಗಿದ್ದು, ಈ ಘಟನೆಯಿಂದ ಸಾವಿರಾರೂ ಜನರ ಬದುಕು ಬೀದಿಗೆ ಬಂದಿದೆ.
ಮಲೆನಾಡಿನ ಜಲ ರಾಕ್ಷಸನ ರುದ್ರನರ್ತನಕ್ಕೆ ಬದುಕನ್ನೆ ಕಳೆದುಕೊಂಡವರು ಸಾವಿರಾರು ಜನ. ಅವರೆಲ್ಲರೂ ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಮಲೆನಾಡ ಮಳೆ ಬೆಟ್ಟ-ಗುಡ್ಡ ಎಲ್ಲವನ್ನೂ ತಿಂದು-ತೇಗಿ ನೀರು ಕುಡಿದಿದೆ.ಇಲ್ಲಿನ ಪರಿಸ್ಥಿತಿ ನೋಡಿದರೇ ಮಲೆನಾಡಿನ ಜನರು ಮುಂದೆ ಹೇಗೆ ದುಡಿಯುತ್ತಾರೆ, ಹೊಟ್ಟೆಗೆ ಹಿಟ್ಟು ಹೇಗೆ ಪಡೆದುಕೊಳ್ಳುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಆ ದಿನದ ಘಟನೆಗಳು ಇಂದಿಗೂ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುತ್ತಿದ್ದು, ಮತ್ತೆ ಯಾವುದೇ ಕಾರಣಕ್ಕೂ ಈ ರೀತಿಯಾ ಅವಾಂತರಗಳು ಸೃಷ್ಟಿ ಆಗೋದು ಬೇಡಾ ಎಂದೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಈ ಮಳೆ ಮಲೆನಾಡು ಜನರ ಮನೆ ಜೊತೆ ಹೊಲ-ಗದ್ದೆ-ತೋಟಗಳನ್ನೆಲ್ಲಾ ಕೊಚ್ಚಿಕೊಂಡು ಮತ್ತೆಲ್ಲಿಗೋ ತೆಗೆದುಕೊಂಡು ಹೋಗಿ ಬಿಟ್ಟಿದೆ. ನಮ್ಮ ಮುಂದಿನ ಬದುಕು ಹೇಗೆ ಎಂದು ಪ್ರತಿಯೊಬ್ಬರೂ ಯೋಚನೆ ಮಾಡುವಂತಹ ಪರಿಸ್ಥಿತಿ ಈಗ ತಲೆ ದೋರಿದೆ.