ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಸೇರಿದಂತೆ ಹಲವೆಡೆ ಭಾರೀ ಗಾಳಿ ಮಳೆ ಆಗುತ್ತಿದೆ.
ಕೊಟ್ಟಿಗೆಹಾರ, ಬೈದೋಳ್ಳಿ, ಮಗ್ಗಲ ಮಕ್ಕಿ, ಹಳೇಕೋಟೆ, ಗುತ್ತಿ ಹಳ್ಳಿ, ಜಾವಳಿ, ಪಲ್ಗುಣಿ, ಕೋಗಿಲೆ ಬೆಟ್ಟಗೆರೆ, ಕೋಳೂರು, ಔಸ್ನಾ, ಬಾಳುರು ಸೇರಿದಂತೆ ಇನ್ನೂ ಮುಂತಾದ ಕಡೆಗಳಲ್ಲಿ ಭಾರಿ ಗಾಳಿ ಮಳೆ ಸುರಿಯುತ್ತಿದೆ.