ಕರ್ನಾಟಕ

karnataka

ETV Bharat / state

ಸತತ ಮೂರು ಗಂಟೆ ಸುರಿದ ಮಳೆ: ಮತ್ತೆ ಮಲೆನಾಡ ಜನ ಸುಸ್ತು - chikkamagaluru rain fall news

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಇತ್ತೀಚೆಗೆ ದುರಸ್ತಿಗೊಂಡ ರಸ್ತೆ ಕೊಚ್ಚಿಹೋಗಿದೆ. ಗಂಜಿ ಕೇಂದ್ರದಿಂದ 20 ದಿನಗಳ ಹಿಂದಷ್ಟೇ ತಮ್ಮ ಗ್ರಾಮಕ್ಕೆ ತೆರಳಿದ ಸಂತ್ರಸ್ತರಿಗೆ ಮತ್ತೆ ವರುಣನ ಆತಂಕ ಆರಂಭವಾಗಿದೆ.

ಸತತ ಮೂರು ಗಂಟೆ ಸುರಿದ ಮಳೆಗೆ ಮತ್ತೇ ಮಲೆನಾಡ ಜನರು ಸುಸ್ತು

By

Published : Sep 26, 2019, 4:13 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸೆಪ್ಟೆಂಬರ್​​ 25ರರಂದು 3ಗಂಟೆಯಲ್ಲಿ ಬರೋಬ್ಬರಿ 6 ಇಂಚು ಮಳೆಯಾಗಿದೆ. ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯಲ್ಲಿ ಇತ್ತೀಚೆಗಷ್ಟೇ ದುರಸ್ತಿಯಾಗಿದ್ದ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋದ ಘಟನೆ ನಡೆದಿದೆ.

ಸತತ ಮೂರು ಗಂಟೆ ಸುರಿದ ಮಳೆಗೆ ಮತ್ತೇ ಮಲೆನಾಡ ಜನರು ಸುಸ್ತು

ಇದೇ ಗ್ರಾಮದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಸೈನಿಕರು, ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿತ್ತು.

20 ದಿನಗಳ ಹಿಂದಷ್ಟೆ ಗಂಜಿ ಕೇಂದ್ರದಿಂದ ಗ್ರಾಮಕ್ಕೆ ತೆರಳಿದ ಸಂತ್ರಸ್ತರು, ನಿಧಾನವಾಗಿ ಬದುಕು ಕಟ್ಟಿ ಕೊಳ್ಳುತ್ತಿದ್ದರು. ಮಹಾಮಳೆಯ ಈ ಘಟನೆಯಿಂದ ಮಲೆನಾಡಿನ ಜನರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.

ABOUT THE AUTHOR

...view details