ಚಿಕ್ಕಮಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಲ್ಲದ ವರುಣನಿಂದ ನಾನಾ ಅವಾಂತರ ಸೃಷ್ಟಿಯಾಗಿದೆ.
ಚಿಕ್ಕಮಗಳೂರು: ನಿಲ್ಲದ ಮಳೆಯ ನಾನಾ ಅವಾಂತರ - ಚಿಕ್ಕಮಗಳೂರಿನ ಐತಿಹಾಸಿಕ ಮಾಗಡಿ ಕೆರೆ ಭರ್ತಿ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ ಜನ ಜೀವನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ನಗರದ ವಿಜಯಪುರ ಬಡಾವಣೆಯಲ್ಲಿ ಮನೆ ಕುಸಿದಿದೆ.
ಮನೆ ಕುಸಿದಿರುವುದು
ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮವಾಗಿದ್ದು. ನಗರದ ವಿಜಯಪುರ ಬಡಾವಣೆಯ ಅಶೋಕ್ ಕಾಮತ್ ಎಂಬುವವರ ಮನೆ ಇದಾಗಿದೆ. ಇನ್ನೊಂದೆಡೆ ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದೆ. ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.
TAGGED:
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ