ಶಿವಮೊಗ್ಗ:ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದೆ.ಪರಿಣಾಮ ಗೋಪಾಲಗೌಡ ಬಡಾವಣೆಯ ಕೃಷ್ಣಮಠದ ಮುಂದಿನ ರಸ್ತೆಯಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ. ಈ ವೇಳೆ ಕಾರೊಂದು ಅಲ್ಲಿ ಸಿಲುಕಿಕೊಂಡಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.
ರಸ್ತೆ ಮಧ್ಯೆ ನೀರಿನಲ್ಲಿ ಸಿಲುಕಿದ್ದವರನ್ನ ರಕ್ಷಿಸಿದ ಅಗ್ನಿ ಶಾಮಕದಳ ಇದೇ ಕ್ರಾಸ್ನಲ್ಲಿದ್ದ ಮನೆಗೆ ನೀರು ನುಗ್ಗಿದ್ದರಿಂದ ವೃದ್ಧರೊಬ್ಬರು ಅಪಾಯಕ್ಕೆ ಸಿಲುಕಿದ್ದರು. ಅವರನ್ನೂ ಸಹ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮನೆ ಒಳಗೆ ಕುಳಿತುಕೊಂಡಿದ್ದ ವೃದ್ಧರನ್ನು ಚೇರ್ ಸಮೇತ ಎತ್ತಿಕೊಂಡು ಬಂದು ಹೊರಗೆ ಬಿಟ್ಟಿದ್ದಾರೆ.
ವೃದ್ದರನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆ-ವಿದ್ಯುತ್ ಸಂಪರ್ಕ ಕಡಿತ :ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನಿರಂತರವಾಗಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡು ಭಾಗದ ಜನರು ತತ್ತರಿಸಿ ಹೋಗಿದ್ದು, ಮಳೆ ಗಾಳಿಯಿಂದ ಜಿಲ್ಲೆಯ ಹತ್ತಾರು ಭಾಗದಲ್ಲಿ ಮರಗಳು ಧರೆಗುರುಳಿವೆ. ಪರಿಣಾಮ ಉಪ ರಸ್ತೆಗಳ ಸಂಪರ್ಕ ಕಡಿತವಾಗಿದೆ.
ಮೂಡಿಗೆರೆ ತಾಲೂಕಿನ ಕೂವೆ, ಮಾಲಿಂಗನಾಡು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಾಲಿಂಗನಾಡಿನಲ್ಲಿ ರಸ್ತೆಗೆ ಬೃಹತ್ ಮರ ಉರುಳಿಬಿದ್ದಿದೆ. ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಸ್ಥಳೀಯರು ದಾರಿ ಮಾಡಿಕೊಂಡಿದ್ದಾರೆ. ಜೊತೆಗೆ ವಿದ್ಯುತ್ ಕಂಬಗಳು ಕೂಡ ಧರೆಗೆ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕವೂ ಕಡಿತವಾಗಿದೆ.
ಓದಿ:ದತ್ತಪೀಠಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಭೇಟಿ: ಗೋ ಮೂತ್ರದಿಂದ ಹೋಮ ಮಂಟಪ ಶುದ್ಧೀಕರಣ